Webdunia - Bharat's app for daily news and videos

Install App

2ಜಿ ಹಗರಣ; ರಾಜಾ ಆಪ್ತ ಸಾಧಿಕ್ ಬಾಚಾ ನಿಗೂಢ ಸಾವು

Webdunia
ಬುಧವಾರ, 16 ಮಾರ್ಚ್ 2011 (16:29 IST)
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ಆಪ್ತ ಹಾಗೂ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಬಿಐಯಿಂದ ವಿಚಾರಣೆಗೊಳಗಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸಾಧಿಕ್ ಬಾಚಾ ಅವರ ಕಳೇಬರವು ಚೆನ್ನೈಯಲ್ಲಿನ ತನ್ನ ಮನೆಯಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಾಚಾ ಅವರು ಸಾವನ್ನಪ್ಪಿದ್ದಾರೆ ಎಂದು ಚೆನ್ನೈಯ ಅಪೋಲೋ ಆಸ್ಪತ್ರೆ ಖಚಿತಪಡಿಸಿದೆ. ಮರಣೋತ್ತರ ಪರೀಕ್ಷೆಗಾಗಿ ರಾಯ್‌ಪೇಟಾದಲ್ಲಿನ ಸರಕಾರಿ ಆಸ್ಪತ್ರೆಗೆ ಕಳೇಬರವನ್ನು ಸಾಗಿಸಲಾಗಿದೆ ಎಂದು ವರದಿಗಳು ಹೇಳಿವೆ.

ಸಾಧಿಕ್ ಬಾಚಾ ಅವರು 'ಗ್ರೀನ್ ಹೌಸ್ ಪ್ರಮೋಟರ್ಸ್' ರಿಯಲ್ ಎಸ್ಟೇಟ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದರು. ಮಾಜಿ ಸಚಿವ ರಾಜಾ ಅವರ ಬೇನಾಮಿ ಸಂಸ್ಥೆಯಿದು ಎಂದು ಸಿಬಿಐ ಶಂಕೆ ವ್ಯಕ್ತಪಡಿಸಿತ್ತು.

ರಾಜಾ ಅವರ ಪತ್ನಿ ಎಂ.ಎ. ಪರಮೇಶ್ವರಿ 2008ರ ಜೂನ್ ತಿಂಗಳಲ್ಲಿ ಈ ಕಂಪನಿಯ ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಾಜಾ ಅವರ ಅಳಿಯ ಆರ್.ಪಿ. ಪರಮೇಶ್ ಕುಮಾರ್, ರಾಜಾ ಸಹೋದರ ಎ. ಕಳಿಯಪರುಮಾಳ್ ಮುಂತಾದವರು ನಿರ್ದೇಶಕರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರಾಜಾ ಆಪ್ತರೇ ಈ ಸಂಸ್ಥೆಯಲ್ಲಿ ಹೆಚ್ಚಿನ ಶೇರುಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.

ರಾಜಾ ಅವರು ಯುಪಿಎ ಮೊದಲ ಅವಧಿಯಲ್ಲಿ ಪರಿಸರ ಖಾತೆ ಸಚಿವರಾದ ಕೆಲವೇ ವಾರಗಳಲ್ಲಿ ಗ್ರೀನ್ ಹೌಸ್ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತ್ತು.

2 ಜಿ ಹಗರಣ ಸಂಬಂಧ ಬಾಚಾ ಅವರನ್ನು ಇತ್ತೀಚೆಗಷ್ಟೇ ಸಿಬಿಐ ಸುದೀರ್ಘ ವಿಚಾರಣೆಗೊಳಪಡಿಸಿತ್ತು. ಹಗರಣದಲ್ಲಿ ರಾಜಾ ಪಾತ್ರದ ಬಗ್ಗೆ ಬಾಚಾ ಹೆಚ್ಚಿನ ವಿವರಣೆ ನೀಡಿದ್ದರು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಚಾ ಸಾವು ಭಾರೀ ನಿಗೂಢತೆಗೆ ಕಾರಣವಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದಿಲ್ಲವಾದರೂ, ಸಿಬಿಐ ವಿಚಾರಣೆಯ ಒತ್ತಡವು ಪ್ರಮುಖ ಎಂದು ಹೇಳಲಾಗುತ್ತಿದೆ.

ಇಂದು ಅವರು ದೆಹಲಿಯಲ್ಲಿ ಮತ್ತೆ ಸಿಬಿಐ ಎದುರು ವಿಚಾರಣೆಗಾಗಿ ಹಾಜರಾಗಬೇಕಿತ್ತು. ಸಿಬಿಐ ಮೂಲಗಳ ಪ್ರಕಾರ, ಬಾಚಾ ತನಿಖೆಗೆ ಸಹಕರಿಸುತ್ತಿದ್ದರು. ಹಲವು ಅಂಶಗಳನ್ನು ವಿಚಾರಣೆ ಸಂದರ್ಭದಲ್ಲಿ ಬಹಿರಂಗಪಡಿಸಿದ್ದರು.

ಇದು ಕೊಲೆಯಾಗಿರಬಹುದು...
1.76 ಲಕ್ಷ ಕೋಟಿ ರೂಪಾಯಿ ಮೌಲ್ಯದ 2ಜಿ ಹಗರಣದಲ್ಲಿ ನಡೆದಿರುವ ಮೊದಲ ಸಾವಿನ ಪ್ರಕರಣವಿದು. ಪ್ರಮುಖ ಕುಳಗಳೇ ಇದರಲ್ಲಿ ಪಾಲ್ಗೊಂಡಿರುವುದರಿಂದ ಬಾಚಾ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಹಗರಣವನ್ನು ಬಯಲಿಗೆಳೆದಿದ್ದ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಅವರಿಗೆ ಈ ಕುರಿತು ಶಂಕೆಗಳಿವೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ಸಾಧಿಕ್ ಓರ್ವ ದುರ್ಬಲ ವ್ಯಕ್ತಿಯಲ್ಲ. ಅವರು ಕಠಿಣ ವ್ಯಕ್ತಿತ್ವ ಹೊಂದಿದ್ದವರು. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಸಂಶಯಗಳಿವೆ ಎಂದಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಒಂದೇ ಯುವತಿಯನ್ನು ಮದುವೆಯಾದ ಸಹೋದರರು, ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ 6 ವರ್ಷದಲ್ಲಿ 5 ಮದುವೆ

ವಿಪಕ್ಷಗಳ ಬೇಡಿಕೆಯಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಬಗ್ಗೆ ಚರ್ಚೆ

Show comments