Webdunia - Bharat's app for daily news and videos

Install App

ಬಾಯ್‌ಫ್ರೆಂಡ್‌ನೊಂದಿಗೆ ಸೆಕ್ಸ್‌ಗಾಗಿ ಕಾಂಡೋಮ್ ಕದ್ದ ಪುತ್ರಿಯನ್ನು ಹತ್ಯೆಗೈದ ತಂದೆ

Webdunia
ಮಂಗಳವಾರ, 29 ಸೆಪ್ಟಂಬರ್ 2015 (18:44 IST)
ಬಾಯ್‌ಫ್ರೆಂಡ್‌ನೊಂದಿಗೆ ಸೆಕ್ಸ್ ಸುಖ ಅನುಭವಿಸಲು ಅಂಗಡಿಯೊಂದರಿಂದ ಕಾಂಡೋಮ್‌ಗಳನ್ನು ಕದಿಯುತ್ತಿರುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕುಬಿದ್ದ 19 ವರ್ಷದ ಯುವತಿಯನ್ನು, ಆಕೆಯ ತಂದೆಯೇ ಕತ್ತು ಹಿಸುಕಿ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
 
ಪಾಕಿಸ್ತಾನ ಮೂಲದ 51 ವರ್ಷ ವಯಸ್ಸಿನ ಅಸಾದುಲ್ಲಾಖಾನ್, ಪುತ್ರಿ ಲಾರಿಬ್ ಮನೆತನದ ಗೌರವಕ್ಕೆ ಧಕ್ಕೆ ತರುತ್ತಿದ್ದಾಳೆ ಎಂದು ಆಕ್ರೋಶಗೊಂಡು ಆಕೆಯನ್ನು ಹತ್ಯೆಗೈದಿದ್ದಾನೆ. ಅಸಾದುಲ್ಲಾಖಾನ್ ಪತ್ನಿ ಶಾಜಿಯಾ ಕೂಡಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ.  
 
ಪುತ್ರಿ ಲಾರಿಬ್ ಮುಸ್ಲಿಂ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದನ್ನು ಸಹಿಸದೆ ಆಕೆಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಸಾದುಲ್ಲಾಖಾನ್ ಪತ್ನಿ ಶಾಜಿಯಾ ಕೂಡಾ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿ, ಪುತ್ರಿಯನ್ನು ಜೀವಂತವಾಗಿಡಲು ತುಂಬಾ ಪ್ರಯತ್ನಿಸಿದೆ. ಆದರೆ, ಬಾಯ್‌ಫ್ರೆಂಡ್‌ನೊಂದಿಗೆ ಸೆಕ್ಸ್ ಮುಂದುವರಿಸುವುದಾಗಿ ಹಟ ಹಿಡಿದಿದ್ದರಿಂದ ಅನಿವಾರ್ಯವಾಗಿ ಹತ್ಯೆ ಮಾಡಬೇಕಾಯಿತು ಎಂದು ತಿಳಿಸಿದ್ದಾಳೆ. 
 
ಪುತ್ರಿ ಹಲವಾರು ದಿನಗಳಿಂದ ಮನೆಯಿಂದ ದೂರವಾಗಿರುತ್ತಿದ್ದಳು. ಮುಸ್ಲಿಮರು ಧರಿಸುವ ಬುರ್ಖಾ ಧರಿಸಲು ಕೂಡಾ ನಿರಾಕರಿಸುತ್ತಿದ್ದಳು. ಒಂದು ದಿನ ಪೊಲೀಸರು ಕರೆ ಮಾಡಿ ನಿಮ್ಮ ಪುತ್ರಿ ಕಾಂಡೋಮ್ ಕದಿಯುವಾಗ ಸಿಕ್ಕುಬಿದ್ದಿದ್ದಾಳೆ ಎಂದು ಹೇಳಿದ್ದರು.
 
ಇದರಿಂದಾಗಿ ನಮ್ಮ ಪುತ್ರಿ ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಸೆಕ್ಸ್ ಸಂಬಂಧವಿರಿಸಿಕೊಂಡಿದ್ದಾಳೆ ಎನ್ನುವುದು ಸ್ಪಷ್ಟವಾಗಿತ್ತು. ನಮ್ಮ ಮನೆತನಕ್ಕೆ ಅಗೌರವ ತರುತ್ತಿದ್ದಾಳೆ ಎನ್ನುವ ಆಕ್ರೋಶದಿಂದ ಹತ್ಯೆ ಮಾಡಲಾಯಿತು ಎಂದು ಅಸಾದುಲ್ಲಾಖಾನ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ