Webdunia - Bharat's app for daily news and videos

Install App

ಶಶಿಕಲಾ ಹಿಡಿತದಿಂದ 19 ಎಐಎಡಿಎಂಕೆ ಶಾಸಕರು ಎಸ್ಕೇಪ್

Webdunia
ಗುರುವಾರ, 9 ಫೆಬ್ರವರಿ 2017 (16:09 IST)
ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಶಶಿಕಲಾ ಬಣದಲ್ಲಿದ್ದ 19 ಶಾಸಕರು ಇದೀಗ ನಾಪತ್ತೆಯಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
 
ನಗರದ ರೆಸಾರ್ಟ್‌‌ನಲ್ಲಿ ವಾಸ್ತವ ಹೂಡಿದ್ದ 120 ಶಾಸಕರಲ್ಲಿ 19 ಶಾಸಕರು ಕಾಣೆಯಾಗಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿಯೇ ಶಾಸಕರು ಕಾಣೆಯಾಗಿರುವುದು ಶಶಿಕಲಾ ಬಣಕ್ಕೆ ಆಘಾತ ಉಂಟು ಮಾಡಿದೆ.
 
ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಿದ ರಾಜ್ಯಪಾಲ ವಿದ್ಯಾಸಾಗರ್ ರಾವ್, ಸಂಜೆ ಐದು ಗಂಟೆಗೆ ಸಿಎಂ ಪನ್ನೀರ್ ಸೆಲ್ವಂ ಅವರನ್ನು ಭೇಟಿ ಮಾಡಲಿದ್ದು, ಸಂಜೆ 7.30 ಗಂಟೆಗೆ ಶಶಿಕಲಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಎಐಎಡಿಎಂಕೆ ಪಕ್ಷದ 135 ಶಾಸಕರು ತಮ್ಮನ್ನು ಬೆಂಬಲಿಸುತ್ತಿದ್ದು ಅಗತ್ಯವಾದಲ್ಲಿ ಶಾಸಕರ ಪರೇಡ್ ನಡೆಸಲು ಸಿದ್ದ ಎಂದು ಶಶಿಕಲಾ ಘೋಷಿಸಿದ್ದಾರೆ.
 
ಚೆನ್ನೈನ ಹೊರವಲಯದಲ್ಲಿರುವ ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ಶಶಿಕಲಾ ಬೆಂಬಲಿತ ಶಾಸಕರು ವಾಸ್ತವ್ಯ ಹೂಡಿದ್ದು,ಇದೀಗ 19 ಶಾಸಕರು ಕಾಣೆಯಾಗಿರುವುದು ತಲೆನೋವು ತಂದಿದೆ. ಶಾಸಕರು ರೆಸಾರ್ಟ್‌ನಲ್ಲಿಯೇ ಅಡಗಿರಬಹುದು ಎಂದು ಶಂಕಿಸಲಾಗಿದೆ.
 
ಎಐಎಡಿಎಂಕೆ ನಾಯಕರು ಕಾಣೆಯಾದ ಶಾಸಕರ ಹುಡುಕಾಟಕ್ಕೆ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರವೂ ರಣ ಮಳೆ ಇರುತ್ತಾ ಇಲ್ಲಿದೆ ವಾರದ ಹವಾಮಾನ ವರದಿ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಮುಂದಿನ ಸುದ್ದಿ
Show comments