Select Your Language

Notifications

webdunia
webdunia
webdunia
webdunia

19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ತಂದೆಯ ಸ್ನೇಹಿತ

19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ತಂದೆಯ ಸ್ನೇಹಿತ
ನವದೆಹಲಿ , ಮಂಗಳವಾರ, 1 ಏಪ್ರಿಲ್ 2014 (12:48 IST)
ದೆಹಲಿಯಲ್ಲಿ 19 ವರ್ಷದ ಫ್ಯಾಷನ್ ವಿನ್ಯಾಸ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಚಿಕ್ಕಪ್ಪ ಅತ್ಯಾಚಾರ ಎಸಗಿದ್ದಾನೆ ಎಂದು ಎಂದು ಆಪಾದಿಸಿದ್ದಾಳೆ. ಈ ಘಟನೆ ಫೆಬ್ರವರಿ 13 ರಂದು ಚಾಣಾಕ್ಯಪುರಿ ಪ್ರದೇಶದ ಜಿಮ್ಖಾನಾ ಕ್ಲಬ್ ನಲ್ಲಿ ನಡೆಯಿತು ಎಂದು ಆಕೆ ಪೊಲೀಸ್ ರಲ್ಲಿ ದೂರು ದಾಖಲಿಸಿದ್ದಾಳೆ.

ಫೆಬ್ರವರಿ 19 ರಂದು ದೂರು ದಾಖಲಿಸಿರುವ ಯುವತಿ ವೃತ್ತಿಪರ ಛಾಯಾಗ್ರಾಹಕನಾದ ತನ್ನ ತಂದೆಯ ಸ್ನೇಹಿತ (ಚಿಕ್ಕಪ್ಪ) ಸಂದೀಪ್ ಕೊಹ್ಲಿ, ಮೂಲತಃ ಲಕ್ನೋ ವಾಸಿಯಾಗಿದ್ದು ತುರ್ತು ಕೆಲಸದ ನಿಮಿತ್ತ ದೆಹಲಿ ಬಂದಿದ್ದರು ಎಂದು ಹೇಳಿದ್ದಾಳೆ.

" ಜಿಮ್ಖಾನಾ ಕ್ಲಬ್ ನಲ್ಲಿ ಬಂದು ಭೇಟಿಯಾಗು ಎಂದು ನನ್ನನ್ನು ಕರೆದ ಆತ ,ನನ್ನ ಮೇಲೆ ಅತ್ಯಾಚಾರ ನಡೆಸಿ ಈ ಬಗ್ಗೆ ಯಾರಿಗಾದರೂ ಹೇಳಿದರೆ ಉಗ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ" ಎಂದು ಹುಡುಗಿ ಆರೋಪಿಸಿದ್ದಾಳೆ.

ಅವಳ ದೂರನ್ನು ಆಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ತಂಡವೊಂದು ಲಕ್ನೋ ಕಳುಹಿಸಲಾಗಿದೆ, ಆದರೆ ಆತ ಇನ್ನೂ ಪತ್ತೆಯಾಗಿಲ್ಲ. ಆದ್ದರಿಂದ ಕೋರ್ಟ್ ಜಾಮೀನುರಹಿತ ವಾರಂಟ್ ನ್ನು ಜಾರಿ ಮಾಡಿದೆ.

Share this Story:

Follow Webdunia kannada