Select Your Language

Notifications

webdunia
webdunia
webdunia
webdunia

55 ವರ್ಷದ ಸಂಬಂಧಿಕನಿಂದ ಯುವತಿಯ ಮೇಲೆ ಬಲಾತ್ಕಾರ

55 ವರ್ಷದ ಸಂಬಂಧಿಕನಿಂದ ಯುವತಿಯ ಮೇಲೆ ಬಲಾತ್ಕಾರ
ಚಿಕ್ಕಬಳ್ಳಾಪುರ , ಶುಕ್ರವಾರ, 25 ಜುಲೈ 2014 (08:52 IST)
18 ವರ್ಷದ ಯುವತಿಯ ಮೇಲೆ 55 ವರ್ಷದ  ಆಕೆಯ ಸಂಬಂಧಿಕನೇ ಅತ್ಯಾಚಾರ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ನಡೆದಿದೆ. 

ಮಂಗಳವಾರ ಈ ಕುಕೃತ್ಯ ನಡೆದಿದ್ದು ಪೀಡಿತ ಯುವಕಿ  ಪ್ರಕರಣ ದಾಖಲಿಸಿದ್ದಾಳೆ.  ತುರ್ತು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಯುವತಿ ತನ್ನ ಮನೆಗೆ ಹಿಂತಿರುಗುವಾಗ ಆರೋಪಿ ಆಕೆಯನ್ನು ತಡೆದಿದ್ದಾನೆ ಮತ್ತು ಆಕೆಯ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾನೆ.  ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. 
 
ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಆತ ಬೆದರಿಕೆ ಒಡ್ಡಿದ್ದ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. 

Share this Story:

Follow Webdunia kannada