Select Your Language

Notifications

webdunia
webdunia
webdunia
webdunia

ದೆಹಲಿ ಶೇಮ್: ಬರ್ತಡೇ ಆಚರಿಸಲು ಕರೆದೊಯ್ದು ಸಾಮೂಹಿಕ ಅತ್ಯಾಚಾರ

ದೆಹಲಿ ಶೇಮ್: ಬರ್ತಡೇ ಆಚರಿಸಲು ಕರೆದೊಯ್ದು ಸಾಮೂಹಿಕ ಅತ್ಯಾಚಾರ
ನವದೆಹಲಿ , ಶನಿವಾರ, 20 ಡಿಸೆಂಬರ್ 2014 (12:29 IST)
18 ವರ್ಷದ ಯುವತಿಯೊಬ್ಬಳು  ತನ್ನ ಪರಿಚಿತರಿಂದಲೇ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಘಟನೆ  ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. 
ಈ ಕುರಿತು ಆರ್.ಕೆ. ಪುರಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. 
 
ಪೀಡಿತೆ ನೀಡಿರುವ ದೂರಿನ ಪ್ರಕಾರ, ಜಾಬ್ ಏಜೆನ್ಸಿಯ ಮೂಲಕ ಕೆಲಸ ಕೊಡಿಸುವ ನೆಪದೊಂದಿಗೆ ಆರೋಪಿಗಳಲ್ಲಿ ಒಬ್ಬ ಆಕೆಯ ಸ್ನೇಹ ಸಂಪಾದಿಸಿದ್ದ. ಅವರಿಬ್ಬರಲ್ಲಿ  ಆತ್ಮೀಯ ಸ್ನೇಹ ಬೆಳೆದಿತ್ತು. ಕಳೆದ ಶುಕ್ರವಾರ  ಆಕೆಯ 18 ನೇ ವರ್ಷದ ಜನ್ಮದಿನವಾಗಿತ್ತು. ಅವಳಿಗೆ ಶುಭಾಶಯ ಕೋರಿದ ಆರೋಪಿಗಳಲ್ಲಿ ಒಬ್ಬ ನಿನ್ನ ಬರ್ತಡೇ ಆಚರಿಸೋಣ ಎಂದು ಆಕೆಯನ್ನು ಕರೆದೊಯ್ದ. ಆತನ ಸ್ನೇಹಿತನು ಕೂಡ ಅವರನ್ನು ಸೇರಿಕೊಂಡ.
 
ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 
 
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 

Share this Story:

Follow Webdunia kannada