Webdunia - Bharat's app for daily news and videos

Install App

ಗೆಳೆಯ ಮತ್ತು ಆತನ ಸ್ನೇಹಿತರಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

Webdunia
ಶನಿವಾರ, 1 ಆಗಸ್ಟ್ 2015 (17:04 IST)
17 ವರ್ಷದ ಬಾಲಕಿಯ ಮೇಲೆ ಪ್ರಿಯಕರ ಸೇರಿದಂತೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ ನಡೆದ ದಾರುಣ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಈ ಕುರಿತು ಬಾಲಕಿ ನಿನ್ನೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು,  ಆರೋಪಿಗಳಲ್ಲಿ ಒಬ್ಬ ಆಕೆಯ ಪ್ರಿಯಕರನಾಗಿದ್ದಾನೆ. ಆತ ಮತ್ತು ಉಳಿದ ಮೂವರು ತನ್ನ ಮೇಲೆ ಅತ್ಯಾಚಾರವೆಸಗಿದರು. ಮತ್ತಿಬ್ಬರು ಅವರಿಗೆ ಸಹಾಯ ಮಾಡಿದರು ಎಂದು ಆಕೆ ಸಲ್ಲಿಸಿದ ಎಂದು ದೂರಿನಲ್ಲಿ ಹೇಳಲಾಗಿದೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಮಣಿನಗರ್ ಠಾಣಾಧಿಕಾರಿ ಎ.ಜಿ.ಗೋಹಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಮತ್ತೊಬ್ಬ ಪಲಾಯನ ಮಾಡಿರುವುದಾಗಿ ಹೇಳಿದ್ದಾರೆ. 
 
ಜುಲೈ 26 ರಂದು ಬಾಲಕಿ ನಾಪತ್ತೆಯಾಗಿದ್ದಳು. ಅಂದೇ ಆಕೆಯ ತಂದೆ ಮಣಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. 
 
ಶುಕ್ರವಾರ ಅಚಾನಕ್ ಆಗಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷಳಾದ ಯುವತಿ ತನ್ನ ಪ್ರಿಯಕರ ಆಮಿಷ ಒಡ್ಡಿ ತನ್ನನ್ನು ಕರೆದುಕೊಂಡು ಹೋಗಿದ್ದ ಎಂದು ಹೇಳಿದ್ದಾಳೆ. 
 
ಆಕೆಯ ದೂರಿನ ಪ್ರಕಾರ ಆಕೆಯ ಗೆಳೆಯ ಹೊಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ.  ನಂತರ ತನ್ನ ಐವರು ಗೆಳೆಯರನ್ನು ಸಹ ಆತ ಅಲ್ಲಿಗೆ ಕರೆದಿದ್ದಾನೆ. ಅವರಲ್ಲಿ ಮೂವರು ಆಕೆಯ ಮೇಲೆ ಅತ್ಯಾಚಾರವೆಸಗಿದರೆ ಮತ್ತಿಬ್ಬರು ಅವರಿಗೆ ಸಹಾಯ ಮಾಡಿದ್ದಾರೆ . 
 
ನಿನ್ನೆ ರಾತ್ರಿಯೇ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments