Select Your Language

Notifications

webdunia
webdunia
webdunia
webdunia

17 ವರ್ಷದ ಯುವತಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ ಗೆಳೆಯ

17 ವರ್ಷದ ಯುವತಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ ಗೆಳೆಯ
ನವದೆಹಲಿ , ಮಂಗಳವಾರ, 1 ಏಪ್ರಿಲ್ 2014 (12:33 IST)
17 ವರ್ಷದ ಯುವತಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಸಫ್ದರ್ ಜಂಗ್ ಆಸ್ಪತ್ರೆಯ ಬಳಿ ಎಸೆದು ಹೋದ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. 24 ವರ್ಷದ ಆಕೆಯ ಸ್ನೇಹಿತ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಕೆ ಈಗ ಅಪಾಯದಿಂದ ಪಾರಾಗಿದ್ದಾಳೆ ಮತ್ತು ಶೀಘ್ರದಲ್ಲೇ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಲಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಲೆಂಟೈನ್ಸ್ ಡೇ ಪಾರ್ಟಿಗೆ ಕರೆದೊಯ್ಯುವೆ ಎಂದು ಯುವತಿಗೆ ಆಮಿಷ ಒಡ್ಡಿ ಪ್ಲಾಟ್ ಒಂದಕ್ಕೆ ಕರೆದೊಯ್ದು ಆಕೆಯನ್ನು ಬೆದರಿಸಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಘಂಟೆಗಳ ಕಾಲ ನಿರ್ದಯಿಯಾಗಿ ವರ್ತಿಸಿದ ಆತ, ಅವಳ ಪರಿಸ್ಥಿತಿ ಕೆಡುತ್ತಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ಯಿ ಎಂದು ತನ್ನ ಸ್ನೇಹಿತರಿಗೆ ಹೇಳಿ ಓಡಿಹೋಗಿದ್ದಾನೆ.

ಸುಮಾರು 5 ಗಂಟೆ ಸಫ್ದರ್‌ಜಂಗ್ ಆಸ್ಪತ್ರೆಯ ಆವರಣದಲ್ಲಿ ಯುವತಿ ಬಿದ್ದಿರುವುದು ಕಂಡುಬಂದಾಗ ಘಟನೆ ಬೆಳಕಿಗೆ ಬಂದಿದೆ. ಡಿಸಿಪಿ ಬಿಎಸ್ ಜೈಸ್ವಾಲ್ ಮತ್ತು ಹೆಚ್ಚುವರಿ ಡಿಸಿಪಿ ಪಿಎಸ್ ಕುಶ್ವಾ, ಎನ್ ಜಿ ಒ ಅಧಿಕಾರಿಗಳು ಮತ್ತು ಪೋಲಿಸ್ ಉಮೆನ್ ಜೊತೆಗೆ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.

ಹುಡುಗಿ 12 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಶುಕ್ರವಾರ ಶಾಲೆ ಬಿಟ್ಟಾಗ, ಆಕೆಯನ್ನು ತಡೆದು ನಿಲ್ಲಿಸಿದ ಆರೋಪಿ, ತನ್ನ ಸ್ನೇಹಿತನ ಮನೆಯಲ್ಲಿ ವ್ಯಾಲೆಂಟೈನ್ಸ್ ಡೇ ಮತ್ತು ಆಕೆಯ ಜನ್ಮದಿನವನ್ನು ಆಚರಿಸೋಣ ಎಂದು ಕರೆದೊಯ್ದಿದ್ದಾನೆ. ಶನಿವಾರ ಆಕೆಯ 18 ನೇ ಜನ್ಮದಿನಾಚರಣೆಯಾಗಿರುತ್ತದೆ.

ಶೀಘ್ರ ಕಾರ್ಯಾಚರಣೆ ನಡೆಸಿದ ಪೋಲಿಸರು ಆಪಾದಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನ ಮೇಲೆ ಆತ್ಯಾಚಾರ( 376ಐಪಿಸಿ ) ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳ ಹಿತರಕ್ಷಣಾ ಕಾಯ್ದೆಗೆ ಅನುಗುಣವಾಗಿ ಕೇಸ್ ದಾಖಲಿಸಲಾಗಿದೆ ಎಂದು ಪೋಲಿಸ್ ರು ತಿಳಿಸಿದ್ದಾರೆ.

Share this Story:

Follow Webdunia kannada