Select Your Language

Notifications

webdunia
webdunia
webdunia
webdunia

17 ವರ್ಷದ ಬಾಲಕಿಯ ಮೇಲೆ ಅಟೋರಿಕ್ಷಾ ಚಾಲಕರಿಂದ ಅತ್ಯಾಚಾರ: ಬಂಧನ

17 ವರ್ಷದ ಬಾಲಕಿಯ ಮೇಲೆ ಅಟೋರಿಕ್ಷಾ ಚಾಲಕರಿಂದ ಅತ್ಯಾಚಾರ: ಬಂಧನ
ಮುಂಬೈ , ಮಂಗಳವಾರ, 26 ನವೆಂಬರ್ 2013 (15:33 IST)
PR
ನಗರದ ದಹಿಸಾರ್ ಪ್ರದೇಶದ ಗಣಪತ್ ಪಾಟೀಲ್ ಬಡಾವಣೆಯಲ್ಲಿ ನಿನ್ನೆ ರಾತ್ರಿ 17 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಮೂವರು ಅಟೋರಿಕ್ಷಾ ಚಾಲಕರನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ವರದಿಗಳ ಪ್ರಕಾರ, ಬಾಲಕಿಗೆ ಚಿರಪರಿಚಿತನಾದ ಅಟೋರಿಕ್ಷಾ ಚಾಲಕ ಲಿಫ್ಟ್ ಕೊಡುವುದಾಗಿ ನಂಬಿಸಿ ಜನರಹಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಮತ್ತಿಬ್ಬರು ಗೆಳೆಯರೊಂದಿಗೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅತ್ಯಾಚಾರ, ಬೆದರಿಕೆ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada