Webdunia - Bharat's app for daily news and videos

Install App

ನಿಂದನಾ ಮಾತುಗಳನ್ನು ಸಹಿಸಲಾರದೇ ಸಾವನ್ನು ಆಯ್ಕೆ ಮಾಡಿದ ರೇಪ್ ಪೀಡಿತೆ.

Webdunia
ಶನಿವಾರ, 25 ಏಪ್ರಿಲ್ 2015 (15:55 IST)
ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿಯೊಬ್ಬಳು ಅಪಮಾನ ತಾಳಲಾದರೇ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಘಟನೆ ಘಾಜಿಯಾಬಾದ್‌ನಲ್ಲಿ ನಡೆದಿದೆ. 

ಕಳೆದ ಕೆಲ ದಿನಗಳ ಹಿಂದೆ ಬಾಲಕಿಯ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಘಟನೆ ನಡೆದಾಗಿನಿಂದ ಬಾಲಕಿ ಮತ್ತು ಆಕೆಯ ಮನೆಯವರು ನೆರೆಹೊರೆಯವರ ನಿಂದನಾ ಮಾತುಗಳನ್ನು ಕೇಳಿ ರೋಸಿ ಹೋಗಿದ್ದರು. ಈ ಕಾರಣಕ್ಕೆ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು. ಬುಧವಾರ ಬೆಳಿಗ್ಗೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನಿವಾಸದಲ್ಲಿ ಆಕೆ ಬೆಂಕಿ ಹಚ್ಚಿಕೊಂಡಳು. 90% ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ಗುರು ತೇಜ್ ಬಹಾದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಶುಕ್ರವಾರ ಬೆಳಿಗ್ಗೆ ಮೃತ ಪಟ್ಟಿದ್ದಾಳೆ. 
 
ಮಾರ್ಚ್ 27 ರಂದು ಬಾಲಕಿ ಹತ್ತಿರದ ಸೈಬರ್ ಸೆಂಟರ್ ಒಂದಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿಬಿಐ ಪೇದೆಯೊಬ್ಬರ 17 ವರ್ಷದ ಮಗನೊಬ್ಬ ವಿಜಯನಗರದಿಂದ ಆಕೆಯನ್ನು ಅಪಹರಿಸಿದ್ದ. ನಂತರ ಆತನ ಸ್ನೇಹಿತರು ಆಕೆಯ ಮೇಲೆ ಅತ್ಯಾಚಾರ ನಡೆಸಿ ಲಾಲ್ ಕೌನ್ ಬಳಿ ಆಕೆಯನ್ನು ಬಿಡಲಾಗಿತ್ತು.  
 
ಘಟನೆ ನಡೆದ ಮೇಲೆ 4 ದಿನಗಳವರೆಗೆ ಆಕೆಗೆ ಪ್ರಜ್ಞೆ ಬಂದಿರಲಿಲ್ಲ. ಎಚ್ಚರವಾದಾಗ ಆಕೆ ನಡೆದ ಘಟನೆಯನ್ನು ತನ್ನ ಕುಟುಂಬದ ಸದಸ್ಯರಿಗೆ ವಿವರಿಸಿ ಆರೋಪಿಗಳಲ್ಲಿ ಒಬ್ಬನನ್ನು ತಾನು ಗುರುತಿಸುವುದಾಗಿ ಹೇಳಿದ್ದಳು. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಾರ್ಚ್ 30 ರಂದು ಪೋಷಕರು ದೂರು ದಾಖಲಿಸಿದ್ದರು. ವೈದ್ಯಕೀಯ ವರದಿಯ ಪ್ರಕಾರ ಬಾಲಕಿಗೆ ಮಾದಕ ದ್ರವ್ಯವನ್ನು ಕುಡಿಸಲಾಗಿತ್ತು ಮತ್ತು ಆಕೆಯ ದೇಹದ ಮೇಲೆ ಕೆಂಪು ಗುರುತುಗಳಿದ್ದವು. 
 
ದೂರನ್ನು ಆಧರಿಸಿ ಪೊಲೀಸರು ಸಿಬಿಐ ಪೇದೆಯ ಪುತ್ರನನ್ನು ಬಂಧಿಸಿದ್ದರು. 
 
ಇನ್ನುವರೆಗೂ ಬಾಲಕಿಯ ಸಾವಿಗೆ ಕಾರಣವನ್ನು ನಾವು ಕಂಡುಕೊಂಡಿಲ್ಲ. ಈ ಕುರಿತು ಆಕೆಯ ಕುಟುಂಬದವರು ಕೂಡ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಹರಿದಯಾಳ್ ಯಾದವ್ ತಿಳಿಸಿದ್ದಾರೆ. 
 
ಆರೋಪಿಗಳೊಬ್ಬನಾದ ಅಪ್ರಾಪ್ತ ಬಾಲಕನ ಮನೆಯವರು ಕಳೆದ ಒಂದು ವಾರದಿಂದ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಮೃತಳ ತಂದೆ ಹೇಳಿದ್ದಾನೆ. 
 
ಅಲ್ಲದೆ ನೆರೆಹೊರೆಯವರು ನಮ್ಮ ಮನೆಗೆ ಬಂದು ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಆಕೆ ಘಟನೆಯನ್ನು ಮರೆಯಬೇಕೆಂದು ಬಯಸಿದ್ದರು ಕೂಡ ಜನರು ಚುಚ್ಚು ಮಾತುಗಳಿಂದ ಆಕೆಯನ್ನು ಹಿಂಸಿಸುತ್ತಿದ್ದರು. ಅಲ್ಲದೇ ಆರೋಪಿಯ ಸಂಬಂಧಿಕರು ನಮ್ಮ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನೋಡಿ ಆಕೆ ಬೇಸತ್ತಿದ್ದಳು ಪೀಡಿತಳ ತಂದೆ ಅಳಲು ತೋಡಿಕೊಂಡಿದ್ದಾರೆ. 
 
ಮಥುರಾದ 14ರ ಹರೆಯದ ಬಾಲಕಿ ಕೂಡ ಇದೇ ಕಾರಣಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ