Select Your Language

Notifications

webdunia
webdunia
webdunia
webdunia

15 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಪ್ರಿನ್ಸಿಪಾಲ್

15 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಪ್ರಿನ್ಸಿಪಾಲ್
ಮುಝಪ್ಪರ್‌ನಗರ , ಸೋಮವಾರ, 27 ಏಪ್ರಿಲ್ 2015 (11:57 IST)
ರಕ್ಷಕನೇ ಭಕ್ಷಕನಾದ ಕಥೆಯಿದು. ಶಾಲೆಯ ಪ್ರಾಚಾರ್ಯನೇ 15 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಹೇಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು , ಆ ಶಾಲೆ, ಆರೋಪಿ ಪ್ರಾಚಾರ್ಯ ದಿನೇಶ್ ಕುಮಾರ್‌ಗೆ ಸೇರಿದ್ದಾಗಿದೆ.  

ಮುಝಪ್ಪರ್‌ನಗರದ  ಶಾಮ್ಲಿಯಲ್ಲಿ ಈ ಘಟನೆ ನಡೆದಿದ್ದು,  ಬಾಲಕಿ 6ನೇ ತರಗತಿಯಲ್ಲಿ ಓದುತ್ತಿದ್ದಳು. ಶನಿವಾರ ಶಾಲಾ ಅವಧಿ ಮುಗಿದ ನಂತರ ಸ್ವಲ್ಪ ಸಮಯ ಇಲ್ಲೇ ಇರು, ಏನೋ ಕೆಲಸವಿದೆ ಎಂದು ಬಾಲಕಿ ಬಳಿ ಹೇಳಿದ ಪ್ರಿನ್ಸಿಪಾಲ್ ಬಳಿಕ ಅತ್ಯಾಚಾರ ಎಸಗಿದ್ದಾನೆ. 
 
ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ಪರಿಣಾಮ ಭೀಕರವಾಗಿರುತ್ತದೆ ಎಂದು ಆತ ವಿದ್ಯಾರ್ಥಿನಿಗೆ ಬೆದರಿಗೆ ಒಡ್ಡಿದ್ದ. ಆದರೆ ಬಾಲಕಿ ಮನೆಗೆ ಮರಳಿ ತಂದೆ-ತಾಯಿ ಬಳಿ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣ ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿ ದಿನೇಶ್ ಕುಮಾರನನ್ನು ಬಂಧಿಸಿರುವ ಪೊಲೀಸರು ಪೋಸ್ಕೋ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ. 

Share this Story:

Follow Webdunia kannada