Select Your Language

Notifications

webdunia
webdunia
webdunia
webdunia

14 ವರ್ಷದವನಿಂದ 7ರ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ

14 ವರ್ಷದವನಿಂದ 7ರ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ
ಬೆಂಗಳೂರು , ಸೋಮವಾರ, 4 ಜನವರಿ 2016 (14:42 IST)
14 ವರ್ಷದ ಬಾಲಕನೋರ್ವ 7 ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 
 
ಪೊಲೀಸ್ ಮಾಹಿತಿ ಪ್ರಕಾರ ಜನವರಿ 1 ರಂದು ಈ ದುರ್ಘಟನೆ ನಡೆದಿದ್ದು ಘಟನೆ ನಡೆದ ಸಂದರ್ಭದಲ್ಲಿ ಬಾಲಕಿಯ ತಾಯಿ ಮನೆಯಲ್ಲಿರಲಿಲ್ಲ. ಆರೋಪಿ ಬಾಲಕ ಪೀಡಿತಳ ನೆರೆಮನೆಯವನಾಗಿದ್ದು, ಬಾಲಕಿಯ ಜತೆ ಆಟವಾಡಲು ನಿತ್ಯ ಆಕೆಯ ಮನೆಗೆ ಬರುತ್ತಿದ್ದ. ಬಾಲಕಿಯ ತಾಯಿ ಮನೆಗೆ ಬಂದಾಗ ತನ್ನ ಮಗಳ ಮೇಲೆ ಆತ ಲೈಂಗಿಕ ದೌರ್ಯನ್ಯ ನಡೆಸುತ್ತಿದ್ದುದನ್ನು ನೋಡಿ ಆಘಾತಗೊಂಡಿದ್ದಾಳೆ. ತಕ್ಷಣ ಬಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
 
ಪೀಡಿತಳ ತಾಯಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬಾಲಕ ಉತ್ತರ ಕರ್ನಾಟಕದವನಾಗಿದ್ದು ತನ್ನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. 

Share this Story:

Follow Webdunia kannada