Select Your Language

Notifications

webdunia
webdunia
webdunia
webdunia

14 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ವಿವಾಹವಾದ 37 ವರ್ಷ ವಯಸ್ಸಿನ ಕಾಮುಕ ಶಿಕ್ಷಕ ಭೂಪ

14 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ವಿವಾಹವಾದ 37 ವರ್ಷ ವಯಸ್ಸಿನ ಕಾಮುಕ ಶಿಕ್ಷಕ ಭೂಪ
ಧರ್ಮಪುರಿ , ಮಂಗಳವಾರ, 1 ಏಪ್ರಿಲ್ 2014 (11:21 IST)
ಆಘಾತಕಾರಿ ಘಟನೆಯೊಂದರಲ್ಲಿ 37 ವರ್ಷ ವಯಸ್ಸಿನ ಶಿಕ್ಷಕ ತನ್ನ ಮನೆಗೆ ಟ್ಯೂಶನ್‌ಗೆ ಬರುತ್ತಿದ್ದ 14 ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು ಮದುವೆಯಾದ ಆರೋಪ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಟ್ಯೂಶನ್‌ಗಾಗಿ ಮನೆಗೆ ಬಂದಾಗ ಕಾಮುಕ ಶಿಕ್ಷಕ ತನ್ನ ಕಾಮಬಾಣವನ್ನು ಬಿಟ್ಟು, ಆಕೆಯನ್ನು ವಿವಾಹವಾಗುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿದ್ಯಾರ್ಥಿನಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ, ಆರೋಪಿಗೆ ನೆರವು ನೀಡಿದ 60 ವರ್ಷದ ವೃದ್ಧೆ ಕಾಣೆಯಾಗಿದ್ದು, ಆಕೆಯ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮಪುರಿಯಿಂದ 32 ಕಿ.ಮೀ ದೂರದಲ್ಲಿರುವ ಮುಲ್ಲುವಾಡಿ ನಿವಾಸಿಯಾದ ಆರೋಪಿ ಶಿಕ್ಷಕ ಎನ್. ಆರ್ಮುಗಂ ಈಗಾಗಲೇ ಮದುವೆಯಾಗಿದ್ದಾನೆ. ಆದರೆ, ಇದೀಗ ಮತ್ತೆ 14 ವರ್ಷ ವಯಸ್ಸಿನ ಬಾಲಕಿಯನ್ನು ವಿವಾಹವಾಗಿ ಜೈಲು ಸೇರಿದ್ದಾನೆ.

ಪೊಲೀಸರು ಆರೋಪಿ ಆರ್ಮುಗಂ‌ ವಿರುದ್ಧ ಅತ್ಯಾಚಾರ, ವಂಚನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದ್ದು, ನ್ಯಾಯಾಂಗದ ಮುಂದೆ ಹಾಜರುಪಡಿಸಿ ಸೇಲಂ ಕೇಂದ್ರ ಜೈಲಿಗೆ ಕಳುಹಿಸಲಾಗಿದೆ

Share this Story:

Follow Webdunia kannada