Select Your Language

Notifications

webdunia
webdunia
webdunia
webdunia

14 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ ಕಾಮುಕ ಸೈನಿಕ

14 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ ಕಾಮುಕ ಸೈನಿಕ
ಬೆಂಗಳೂರು , ಮಂಗಳವಾರ, 28 ಜನವರಿ 2014 (16:43 IST)
PTI
ಗೆಳೆಯನ ಪುತ್ರಿಯಾಗಿದ್ದ 14 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ 32 ವರ್ಷ ವಯಸ್ಸಿನ ಕಾಮುಕ ಸೈನಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ವ್ಯಯಕ್ತಿಕ ಕಾರಣಗಳಿಗಾಗಿ ಮನೆಯಿಂದ ಹೊರಗಡೆ ಹೋಗುತ್ತಿದ್ದು ಮಗುವನ್ನು ನೋಡಿಕೊಳ್ಳುವಂತೆ ಆರೋಪಿ ಧರ್ಮ್ ವೀರ್‌ಗೆ ಆತನ ಗೆಳೆಯನು ಕೋರಿದ್ದಾನೆ.

ದಂಪತಿಗಳು ಮನೆಗೆ ಮರಳಿ ಬಂದಾಗ ಹಸುಗೂಸು ಜೋರಾಗಿ ಅಳುತ್ತಿರುವುದು ಮತ್ತು ಮೈಮೇಲಾದ ಗಾಯಗಳನ್ನು ಕಂಡು ಮಗುವನ್ನು ಗಾಬರಿಯಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಹಸುಗೂಸಿನ ತಪಾಸಣೆ ನಡೆಸಿದಾಗ ಅತ್ಯಾಚಾರವಾಗಿರುವುದು ಕಂಡುಬಂದಿದೆ.ಮಗುವಿನ ಪೋಷಕರು ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Share this Story:

Follow Webdunia kannada