Select Your Language

Notifications

webdunia
webdunia
webdunia
webdunia

13 ಆರ್‌ಜೆಡಿ ಶಾಸಕರ ಬಂಡಾಯ: ಲಾಲೂಗೆ ಹಿನ್ನಡೆ

13 ಆರ್‌ಜೆಡಿ ಶಾಸಕರ ಬಂಡಾಯ: ಲಾಲೂಗೆ ಹಿನ್ನಡೆ
, ಸೋಮವಾರ, 24 ಫೆಬ್ರವರಿ 2014 (17:39 IST)
PR
PR
ಪಾಟ್ನಾ: ರಾಷ್ಟ್ರೀಯ ಜನತಾದಳದ 13 ಶಾಸಕರು ಬಂಡಾಯವೆದ್ದು, ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ತಮಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲವೆಂದು ಆಕ್ರೋಶಗೊಂಡ ಶಾಸಕರು ರಾಜೀನಾಮೆ ಸಲ್ಲಿಸಿ ತಮ್ಮದೇ ಗುಂಪು ಮಾಡಿಕೊಂಡಿದ್ದಾರೆ. ಆರ್‌ಜೆಡಿ ಪಕ್ಷ 22 ಮಂದಿ ಶಾಸಕರನ್ನು ಹೊಂದಿದ್ದು, ಅವರಲ್ಲಿ 13 ಶಾಸಕರು ರಾಜೀನಾಮೆ ನೀಡಿದ್ದರಿಂದ ಲಾಲೂ ಪ್ರಸಾದ್ ಯಾದವ್‌ಗೆ ತೀವ್ರ ಹಿನ್ನಡೆಯಾಗಿದೆ.

ಮೇವು ಹಗರಣದಲ್ಲಿ ಆಪಾದಿತರಾಗಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ಲಾಲೂಗೆ ಈಗ ಶಾಸಕರ ಬಂಡಾಯ ಮತ್ತೊಂದು ಹಿನ್ನಡೆಯಾಗಿದೆ.

Share this Story:

Follow Webdunia kannada