ಜಾರ್ಖಂಡ್ :ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ಸಿಎಂ ಹೇಮಂತ್ ಸೊರೇನ್ ರಿಗೆ ನೊಟೀಸ್ ನೀಡಿತ್ತು. ಆದರೆ ಕಳೆದ 24 ತಾಸಿನಿಂದ ಹೇಮಂತ್ ಸೊರೇನ್ ನಾಪತ್ತೆಯಾಗಿದ್ದು, ಖಾಸಗಿ ವಿಮಾನದ ಮೂಲಕ ರಾಂಚಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆನ್ನಲಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕರು ಹೇಮಂತ್ ಸೊರೇನ್ ನಮ್ಮೊಡನೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಸಿಎಂ ಹೇಮಂತ್ ಸೊರೇನ್ ಪತ್ತೆ ಸುಳಿವು ನೀಡಿದವರಿಗೆ 11 ಸಾವಿರ ರೂ. ಬಹುಮಾನ ನೀಡುವುದಾಗಿ ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಘೋಷಿಸಿದ್ದಾರೆ. ಸಿಎಂ ಎಲ್ಲಿದ್ದಾರೆ ಎಂದು ಸ್ವತಃ ಅವರ ಪಕ್ಷದ ಕಾರ್ಯಕರ್ತರಿಗೇ ಗೊತ್ತಿಲ್ಲ ಎಂದು ಟೀಕಿಸಿರುವ ಬಾಬು ಲಾಲ್ ಮರಾಂಡಿ, ರಾಜ್ಯದ ಮುಖ್ಯಮಂತ್ರಿಯೇ ಈ ರೀತಿ ಗೊತ್ತುಗುರಿಯಿಲ್ಲದೇ ಓಡಿ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೆಹಲಿ ವಿಮಾನ ನಿಲ್ದಾಣದಲ್ಲಿ ಸೊರೇನ್ ರಿಗೆ ಸೇರಿದ ಬಿಎಂಡಬ್ಲ್ಯು ಕಾರ್, 36 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿರುವ ಇ.ಡಿ ಅಧಿಕಾರಿಗಳು ಸಿಎಂ ಚಾಲಕನನ್ನು ವಿಚಾರಣೆಗೊಳಪಡಿಸಿದ್ದಾರೆ.