Select Your Language

Notifications

webdunia
webdunia
webdunia
webdunia

ಹೇಯ: ನೀವೆಂದೂ ಕೇಳರಿಯದ ಅತ್ಯಾಚಾರದ ಕಥೆ ಇದು

ಹೇಯ: ನೀವೆಂದೂ ಕೇಳರಿಯದ ಅತ್ಯಾಚಾರದ ಕಥೆ ಇದು
ಲಖನೌ , ಸೋಮವಾರ, 27 ಜೂನ್ 2016 (14:30 IST)
ಯುವಕನಿಂದ, ಅಪ್ರಾಪ್ತ ಬಾಲಕರಿಂದ, ವೃದ್ಧರಿಂದ ಬಾಲಕಿಯ ಮೇಲೆ, ಯುವತಿಯ ಮೇಲೆ, ವೃದ್ಧೆಯರ ಮೇಲೆ ಅತ್ಯಾಚಾರವಾಗಿರುವ ಬಗೆಗಿನ ಸುದ್ದಿಗಳು ಈಗ ಸಾಮಾನ್ಯ ಎನ್ನುವಷ್ಟು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಮೂರು ಮಹಿಳೆಯರು ಸೇರಿ ಒಂಟಿ ಯುವಕನ ಮೇಲೆ ಅತ್ಯಾಚಾರವೆಸಗಿರಗಿದ ಅಂತರಾಷ್ಟ್ರೀಯ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇದು ನೀವೆಂದೂ ಕೇಳರಿಯದ ಅತ್ಯಾಚಾರದ ಕಥೆ ಇದು. 
 
16 ವರ್ಷದ ಬಾಲಕಿಯೋರ್ವಳು 10 ವರ್ಷದ ಪುಟ್ಟ ಹುಡುಗನ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ, ನಾಗರಿಕ ಸಮಾಜವೇ ತಲೆತಗ್ಗಿಸಬೇಕಾದಂತಹ, ಸಮಸ್ತ ಪೋಷಕರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವಂತಹ ಘಟನೆ ಉತ್ತರ ಪ್ರದೇಶದ ಕುಲ್‌ಹೌಲಿ ಗ್ರಾಮದ ಬಿಧ್ನು ಎಂಬ ಪ್ರದೇಶದಲ್ಲಿ ನಡೆದಿದೆ. 
 
ತನ್ನ ನೆರೆಮನೆಯ ಪುಟ್ಟ ಹುಡುಗನನ್ನು ಬಣ್ಣದ ಮಾತುಗಳಾಡಿ ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋದ ಬಾಲಕಿ ಆತನ ಜತೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ್ದಾಳೆ.
 
ಪರಿಣಾಮ ಬಾಲಕನ ಗುಪ್ತಾಂಗಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಆತನನ್ನು ಕಾನ್ಪುರದ ಹಲ್ಲೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಪೀಡಿತ ಮತ್ತು ಆಕ್ರಮಣಕಾರ ಇಬ್ಬರು ಅಪ್ರಾಪ್ತರಾಗಿರುವುದರಿಂದ ಪ್ರಕರಣ ದಾಖಲಿಸಿಕೊಳ್ಳಲು ಗೊಂದಲವಾಗುತ್ತಿದೆ ಎಂದು ಕಾನ್ಪುರ್ ಎಸ್‌ಎಸ್‌ಪಿ ಶಲಭ್ ಮಾಥೂರ್ ತಿಳಿಸಿದ್ದಾರೆ. 
 
ಪೋಸ್ಕೋ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಬಹುದೆಂದು ಕಾನೂನು ತಜ್ಞರು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೀನ್ಸ್ ತಯಾರಿಸುವುದು ಹೇಗೆ ಗೊತ್ತೇ?