Select Your Language

Notifications

webdunia
webdunia
webdunia
webdunia

ಮೆಮೊನ್‌ಗೆ ನೇಣು ಬಿಗಿದವನಿಗೆ ಬಹುಮಾನ

ಮೆಮೊನ್‌ಗೆ ನೇಣು ಬಿಗಿದವನಿಗೆ ಬಹುಮಾನ
ಪುತ್ತೂರು , ಸೋಮವಾರ, 3 ಆಗಸ್ಟ್ 2015 (09:38 IST)
ಯಾಕೂಬ್ ಮೆಮೊನ್‌ಗೆ ನೇಣು ಬಿಗಿದ ಪೊಲೀಸ್ ಪೇದೆಗೆ ಪುತ್ತೂರಿನ ವಿದ್ಯಾರ್ಥಿಗಳು 10 ಸಾವಿರ ರೂಪಾಯಿ ಬಹುಮಾನವನ್ನು ಕಳುಹಿಸಿದ್ದಾರೆ. 
ನಗರದ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು 10,000 ರೂಪಾಯಿಗಳ ಡಿಡಿಯನ್ನು ಪೊಲೀಸ್ ಪೇದೆಗೆ ಕಳುಹಿಸಿದ್ದಾರೆ. ಪೇದೆಯ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲವಾದ್ದರಿಂದ  ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರ ಹೆಸರಿಗೆ ಪತ್ರ ಮತ್ತು ಡಿಡಿಯನ್ನು ರವಾನಿಸಲಾಗಿದೆ.
 
ಪೊಲೀಸ್ ಪೇದೆಯ ಮಹಾನ್ ಕಾರ್ಯವನ್ನು, ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿ ವಿದ್ಯಾರ್ಥಿಗಳು ಈ ಹಣವನ್ನು ಕಳುಹಿಸಿದ್ದಾರೆ. 

Share this Story:

Follow Webdunia kannada