ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಕುರಿತು ಇರುವ ಮೋದಿಯ ಜೀವನ ಮತ್ತು ಆರ್ಥಿಕ ದೃಷ್ಟಿ ಎಂಬ ಪುಸ್ತಕ ಚೀನೀ ಭಾಷೆಗೆ ಅನುವಾದವಾಗುತ್ತಿದ್ದು, ಚೀನಾ ವಿಶ್ವವಿದ್ಯಾಲಯದಲ್ಲಿ ಮುಂದಿನ ತಿಂಗಳು ಅದನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬಿಜೆಪಿಯ ರಾಜ್ಯಸಭಾ ಎಂ.ಪಿ. ತರುಣ್ ವಿಜಯ್ ಬರೆದಿರುವ ಇಂಡಿಯಾಸ್ ಮೋದಿ: ಇನ್‌ಕ್ರೆಡಿಬಲ್ ಎಮರ್ಜೆನ್ಸ್ ಆಫ್ ಎ ಸ್ಟಾರ್ ' ಸಿಚುವಾನ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಸೆಂಟರ್, ಚೆಂಗ್ಡು ಮೂಲಕ ಪ್ರಕಟಗೊಳ್ಳುತ್ತಿದೆ.
ಇದು ಚೀನೀ ವಿದ್ವಾಂಸರಾದ ಡಿ ಕ್ಸೊಯ್ ಮತ್ತು ಜಿಯಾವೈ ಮಾರ್ಗದರ್ಶನದಲ್ಲಿ ಪುಸ್ತಕವನ್ನು ಸಂಪಾದನೆ ಮಾಡಲಾಗಿದೆ. " ಪುಸ್ತಕದ ಬಗ್ಗೆ ನಾನು ಉದ್ವಿಗ್ನನಾಗಿದ್ದೇನೆ ಮತ್ತು ಬೀಜಿಂಗ್, ಶಾಂಘೈ ಮತ್ತು ಚೆಂಗ್ಡುವಿನಲ್ಲಿ ಪುಸ್ತಕ ಬಿಡುಗಡೆಯ ಸಮಾರಂಭ ನಡೆಯಲಿದೆ ಎಂಬ ಆಶಯವಿದೆ ಎಂದು ತರುಣ್ ವಿಜಯ್ ಹೇಳಿದ್ದಾರೆ.
ಪುಸ್ತಕವನ್ನು 13 ಅಧ್ಯಾಯಗಳಲ್ಲಿ ವಿಂಗಡಿಸಲಾಗಿದ್ದು, ತರುಣ್ ವಿಜಯ್ ಭಾರತ ಚೀನಾ ಸಂಬಂಧದ ಮೇಲೆ ಸಿಚುವಾನ್ ವಿಶ್ವವಿದ್ಯಾಲಯದಿಂದ ಫೆಲೋಶಿಪ್ ಪಡೆದಿದ್ದಾರೆ ಮತ್ತು ಭಾರತ ಚೀನಾ ಎಮಿನೆಂಟ್ ಪರ್ಸನ್ಸ್ ಗ್ರೂಪ್‌ನ ಸದಸ್ಯರಾಗಿದ್ದಾರೆ.
ಲೋಕಸಭಾ ಚುನಾವಣೆಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ