Select Your Language

Notifications

webdunia
webdunia
webdunia
webdunia

ಆಮೀರ್ ಖಾನ್ ಪತ್ನಿ ಇರಾನ್, ತಾಲಿಬಾನ್ ದೇಶಗಳಲ್ಲಿ ವಾಸಿಸಲು ಬಯಸುತ್ತಾಳೆಯೇ?: ಸಾಕ್ಷಿ ಮಹಾರಾಜ್

ಆಮೀರ್ ಖಾನ್ ಪತ್ನಿ ಇರಾನ್, ತಾಲಿಬಾನ್ ದೇಶಗಳಲ್ಲಿ ವಾಸಿಸಲು ಬಯಸುತ್ತಾಳೆಯೇ?: ಸಾಕ್ಷಿ ಮಹಾರಾಜ್
ಉನ್ನಾವೋ(ಉತ್ತರಪ್ರದೇಶ) , ಮಂಗಳವಾರ, 24 ನವೆಂಬರ್ 2015 (17:05 IST)
ವಿವಾದಾತ್ಮಕ ಹೇಳಿಕೆಗಳಿಂದ ಖ್ಯಾತಿ ಪಡೆದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಇರಾನ್ ಅಥವಾ ತಾಲಿಬಾನ್ ದೇಶದಲ್ಲಿ ವಾಸಿಸಲು ಬಯಸುತ್ತಿದ್ದಾಳೆಯೇ ಎಂದು ಪ್ರಶ್ನಿಸಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
  
ಖಾಸಗಿ ಸುದ್ದಿ ಚಾನಲ್‌ನೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್, ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿರುವ ಅಮೀರ್ ಖಾನ್ ಹೇಳಿಕೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿಯನ್ನು ಅಪಮಾನಿಸುವ ಸಂಚಿದೆ ಎಂದು ಗುಡುಗಿದ್ದಾರೆ.  
 
ಒಂದು ವೇಳೆ, ಅಮೀರ್ ಖಾನ್ ತಾವೇ ಸ್ವಂತ ತಿಳುವಳಿಕೆಯಿಂದ ಹೇಳಿಕೆ ನೀಡಿದಲ್ಲಿ ಅದೊಂದು ದುರದೃಷ್ಟಕರ ಸಂಗತಿ ಎಂದರು 
 
ಅಮೀರ್ ಖಾನ್ ಚಿತ್ರಗಳು ಬಾಲಿವುಡ್‌ನಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದರೂ ಇಂತಹ ಅಪಮಾನಕರ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
 
ಪ್ರಧಾನಿ ಮೋದಿ ವಿರುದ್ಧ ಯಾರು ಸಂಚು ನಡೆಸುತ್ತಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಮಂತ್ರಿ ಮೋದಿಯವರ ಎಲ್ಲಾ ವಿರೋಧಿಗಳು ಸಂಚು ನಡೆಸುತ್ತಿದ್ದಾರೆ ಎಂದರು. 
 
ಇದಕ್ಕಿಂತ ಮೊದಲು ಬಾಲಿವುಡ್ ನಟ ಅನುಪಮ್ ಖೇರ್, ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ ಅಮೀರ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
 

Share this Story:

Follow Webdunia kannada