Webdunia - Bharat's app for daily news and videos

Install App

1000 ಕಾರ್ ಕದ್ದ 'ಸೂಪರ್ ಕಳ್ಳ'ನ ಮರು ಬಂಧನ

Webdunia
ಶುಕ್ರವಾರ, 8 ಜುಲೈ 2016 (15:16 IST)
1000 ಕಾರ್ ಕದ್ದ ಕುಖ್ಯಾತಿ ಹೊಂದಿರುವ ‘ಸೂಪರ್ ನಟವರಲಾಲ್’, ಪೊಲೀಸ್ ದಾಖಲೆಗಳಲ್ಲಿ ‘ಭಾರತದ ಶೋಭ್ ರಾಜ್‘ ಎಂದೇ ಗುರುತಿಸಿಕೊಳ್ಳುವ 77 ವರ್ಷದ ಧನಿ ರಾಮ್ ಮಿತ್ತಲ್ ಮತ್ತೆ ವಾಹನ ಕದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದಾನೆ. 

ಮಿತ್ತಲ್ ಮೇಲೆ ಈ ವರ್ಷ 130 ವಾಹನ ಕದ್ದ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಸೋಮವಾರ ಶಾಲಿಮಾರ್‌ನಲ್ಲಿ ಮಾರುತಿ ಎಸ್ಟಿಮ್ ಕಾರ್ ಕದ್ದಿದ್ದ ಆರೋಪದ ಮೇಲೆ ಪೂರ್ವ ದೆಹಲಿಯ ಪಶ್ಚಿಮ ವಿಹಾರದಲ್ಲಿ ಆತನನ್ನು ಬಂಧಿಸಲಾಗಿದೆ. ಕದ್ದ ಕಾರ್‌ನ್ನು ಸ್ಕ್ರ್ಯಾಪ್ ಡೀಲರ್ ಬಳಿ ಮಾರಾಟ ಮಾಡುತ್ತಿದ್ದಾಗ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. 
 
ಕಳೆದ ಮೇ 4 ರಂದು ಬಿಡುಗಡೆಯಾದ ಬಳಿಕ ಆತ ಕದ್ದ ಎರಡನೆಯ ಕಾರ್ ಇದಾಗಿದೆ. ಮಾರ್ಚ್ ತಿಂಗಳಲ್ಲಿ ಬಂಧಿಸಲ್ಪಟ್ಟಿದ್ದ ಆತನನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. 
 
ಸುಮಾರು 6 ದಶಕಗಳಿಂದ ಈ ದಂಧೆಯಲ್ಲಿರುವ ಆತ ಲೆಕ್ಕವಿಲ್ಲದಷ್ಟು ಸಲ ಜೈಲಿಗೆ ಹೋಗಿ ಬಂದಿದ್ದಾನೆ. ದೆಹಲಿ, ಹರಿಯಾಣ, ರಾಜಸ್ಥಾನ, ಚಂದೀಘಡ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆತ ಕಾರುಬಾರು ನಡೆಸುತ್ತಿದ್ದು ಸಾವಿರಕ್ಕಿಂತ ಹೆಚ್ಚು ವಾಹನಗಳನ್ನು ಕದ್ದಿದ್ದಾನೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನವನ್ನು ನೈಸ್ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಗಿದೆ ಖತರ್ನಾಕ್ ಪ್ಲ್ಯಾನ್

Karnataka Weather: ಎರಡು ದಿನಗಳಿಗೆ ಹವಾಮಾನದಲ್ಲಿ ಆಗಲಿದೆ ಮಹತ್ವದ ಬದಲಾವಣೆ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

ಮುಂದಿನ ಸುದ್ದಿ
Show comments