Select Your Language

Notifications

webdunia
webdunia
webdunia
webdunia

ರೇಪ್ ಆರೋಪಿ ಆಸಾರಾಮ್ ಬಾಪುಗೆ ಜೈಲಿನಲ್ಲಿ ದಿನಕ್ಕೆ 40 ನಿಮಿಷ ಮಸಾಜ್‌

ರೇಪ್ ಆರೋಪಿ ಆಸಾರಾಮ್ ಬಾಪುಗೆ ಜೈಲಿನಲ್ಲಿ ದಿನಕ್ಕೆ 40 ನಿಮಿಷ ಮಸಾಜ್‌
ಜೋಧಪುರ್(ರಾಜಸ್ಥಾನ್) , ಬುಧವಾರ, 2 ಸೆಪ್ಟಂಬರ್ 2015 (21:31 IST)
15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ಆಸಾರಾಮ್ ಬಾಪು ಜೈಲಿನಲ್ಲಿ ವಿಐಪಿ ಸೇವೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾದ ಕೈದಿಯೊಬ್ಬರು, ಆಸಾರಾಮ್ ಜೈಲಿನಲ್ಲಿ ವಿಐಪಿ ಸೌಲಭ್ಯಗಳನ್ನು ಪಡೆಯುತ್ತಿದ್ದು, ತನ್ನ ಸೆಲ್‌ನಿಂದ ಹೊರಗಡೆ ತಿರುಗಲು ಕೂಡಾ ಅನುಮತಿ ನೀಡಲಾಗಿದೆ. ಅವರ ಬಟ್ಟೆಗಳನ್ನು ಲಾಂಡ್ರಿಗೆ ಕಳುಹಿಸಲಾಗುತ್ತದೆ ಎನ್ನುವ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ.  
 
ಅಸಾರಾಮ್ ಬಾಪುಗೆ ಪ್ರತಿದಿನ 30 ರಿಂದ 40 ನಿಮಿಷಗಳ ಕಾಲ ಮಸಾಜ್ ಮಾಡಲಾಗುತ್ತದೆ. ಮಸಾಜ್ ಮಾಡಲು ಐವರು ಸಹಾಯಕರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾನೆ.
 
ಗಮನಾರ್ಹ ವಿಷಯವೆಂದರೆ, ಆಸಾರಾಮ್ ಉಪಹಾರದ ಸಂದರ್ಭದಲ್ಲಿ ಡ್ರೈ ಫ್ರುಟ್‌ ಮತ್ತು ಫ್ರುಟ್‌ಗಳನ್ನು ನೀಡಲಾಗುತ್ತಿದೆ
 
ಆಸಾರಾಮ್ ಬಾಪು ದಿನದ ಬಹುತೇಕ ಸಮಯವನ್ನು ಅತ್ಯಾಚಾರ ಆರೋಪ ಎದುರಿಸುತ್ತಿರುವ ಕೈದಿಗಳೊಂದಿಗೆ ಸಂವಾದ ನಡೆಸುತ್ತಿದ್ದು ಕಾನೂನಿನ ಜ್ಞಾನ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
 

Share this Story:

Follow Webdunia kannada