Select Your Language

Notifications

webdunia
webdunia
webdunia
webdunia

ರಾಜೆ ಮತ್ತೊಂದು ಹೆಲಿಕಾಪ್ಟರ್ ಕೊಳ್ಳಲು ಬಯಸಿದ್ದರು

ರಾಜೆ ಮತ್ತೊಂದು ಹೆಲಿಕಾಪ್ಟರ್ ಕೊಳ್ಳಲು ಬಯಸಿದ್ದರು
ನವದೆಹಲಿ , ಶನಿವಾರ, 30 ಏಪ್ರಿಲ್ 2016 (14:37 IST)
ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಅವರ ವಿರುದ್ಧ ಕಟು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ 2008 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಣ್ಣದಿದ್ದರೆ ಮತ್ತೊಂದು ಆಗಸ್ಟಾ ಹೆಲಿಕಾಪ್ಟರ್ ಕೊಳ್ಳುತ್ತಿದ್ದರು ಎಂದು ದೂರಿದೆ. 

ರಾಜೆ ಆಗಸ್ಟಾ ವೆಸ್ಟಲ್ಯಾಂಡ್‌ನಿಂದ 17 ಸೀಟುಗಳ AW139 ಹೆಲಿಕಾಪ್ಟರ್ ಕೊಳ್ಳಲು ಆಸಕ್ತರಾಗಿದ್ದರು. 7 ಕೋಟಿ ರೂ ಪ್ರೀಮಿಯಂ ನೀಡುವುದರ ಮೂಲಕ 58 ಕೋಟಿ ಮೌಲ್ಯದ ಹೆಲಿಕಾಪ್ಟರ್ ಖರೀದಿಸಲು ಹೊರಟಿದ್ದರು ಎಂದು ಪಿಸಿಸಿ ಅಧ್ಯಕ್ಷ ಸಚಿನ್ ಪೈಲಟ್ ಆರೋಪಿಸಿದ್ದಾರೆ. 
 
ಅಗಸ್ಟಾ A109E ವಿದ್ಯುತ್ ಹೆಲಿಕಾಪ್ಟರ್ ಖರೀದಿಯಲ್ಲಿ ಸಂಭವಿಸಿದ ಅಕ್ರಮಗಳ ಹೊರತಾಗಿಯೂ ಅವರು ಅದನ್ನು ಖರೀದಿಸುವವರಿದ್ದರು. ಆದರೆ ಚುನಾವಣಾ ಸೋಲು ಅವರ ಬಯಕೆಗೆ ತಡೆ ಒಡ್ಡಿತು. ಈ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಪ್ರಾಮಾಣಿಕ ವ್ಯಕ್ತಿ: ಅಮರ್ ಸಿಂಗ್