Select Your Language

Notifications

webdunia
webdunia
webdunia
webdunia

ಹಿಂದೂ ವಿವಾಹ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟ ಅಸ್ತು

ಹಿಂದೂ ವಿವಾಹ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟ ಅಸ್ತು
ನವದೆಹಲಿ , ಭಾನುವಾರ, 25 ಮಾರ್ಚ್ 2012 (20:10 IST)
PR
ಹಿಂದು ವಿವಾಹ ಕಾಯಿದೆ -1955 ಮತ್ತು ವಿಶೇಷ ವಿವಾಹ ಕಾಯಿದೆ -1954ಕ್ಕೆ ಸಂಬಂಧಿಸಿದ ಪ್ರಮುಖ ತಿದ್ದುಪಡಿಗಳಿಗೆ ಕೇಂದ್ರ ಸಂಪುಟ ಅಂಗೀಕಾರ ನೀಡಿದೆ. ಪರಸ್ಪರ ಭಿನ್ನಾಭಿಪ್ರಾಯಗಳಿಂದ ಬೇರೆ ಬೇರೆಯಾಗಲು ಬಯಸುವ ದಂಪತಿಗಳಿಗೆ ಈ ತಿದ್ದುಪಡಿಯಿಂದ ಹೆಚ್ಚು ಅನುಕೂಲವಾಗಲಿದೆ.

ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಕೋರ್ಟಿಗೆ ಕ್ಷಿಪ್ರ ನಿರ್ಧಾರಗಳನ್ನು ಕೈಗೊಳ್ಳಲು ಪುನಾರಚಿತ ವಿವಾಹ ಕಾಯಿದೆ (ತಿದ್ದುಪಡಿ) ಮಸೂದೆ - 2010 ಆಸ್ಪದ ಮಾಡಿಕೊಡುತ್ತದೆ. ಸಂಪುಟ ಸ್ಥಾಯೀ ಸಮಿತಿಯ ಪ್ರಮುಖ ಶಿಫಾರಸುಗಳನ್ನು ಗಮನಿಸಿ ಈ ಮಸೂದೆಯನ್ನು ಪುನಾರಚಿಸಲಾಗಿದೆ.

ಈ ಮಸೂದೆಯನ್ನು ಎರಡು ವರ್ಷಗಳ ಹಿಂದೆ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಬಳಿಕ ಜಯಂತಿ ನಟರಾಜನ್‌ ಅವರ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ (ಸಿಬ್ಬಂದಿ ಕಾನೂನು ಮತ್ತು ನ್ಯಾಯ) ವಶಕ್ಕೆ ಒಪ್ಪಿಸಲಾಗಿತ್ತು. ಇದೀಗ ಪುನಾರಚಿತ ಮಸೂದೆ ವಿಚ್ಛೇದನಗಳನ್ನು ಇನ್ನಷ್ಟು ಸುಲಭಗೊಳಿಸಲಿದೆ. ಈ ಕಾಯಿದೆ ಗಂಡನ ಆಸ್ತಿಯನ್ನು ಪಡೆಯುವ ಹಕ್ಕು ಹೆಂಡತಿಗೆ ಇದೆ ಎಂದೂ ಸ್ಪಷ್ಟವಾಗಿ ಹೇಳಿದೆ. ದತ್ತು ಮಕ್ಕಳಿಗೂ ಆಸ್ತಿ ಪಾಲಿನಲ್ಲಿ ಮಕ್ಕಳಿಗಿರುವಷ್ಟೇ ಹಕ್ಕಿದೆ ಎಂದೂ ಕಾಯಿದೆಯಲ್ಲಿ ಹೇಳಲಾಗಿದೆ.

Share this Story:

Follow Webdunia kannada