Select Your Language

Notifications

webdunia
webdunia
webdunia
webdunia

ಹಾರದ ವಿಮಾನ, ಓಡದ ರೈಲು, ರಸ್ತೆಗಿಳಿಯದ ಬಸ್ಸು ಒಡಿಶಾ ಆಂಧ್ರದಲ್ಲಿ ಎಲ್ಲಾ ಬಂದ್‌..

ಹಾರದ ವಿಮಾನ, ಓಡದ ರೈಲು, ರಸ್ತೆಗಿಳಿಯದ ಬಸ್ಸು ಒಡಿಶಾ ಆಂಧ್ರದಲ್ಲಿ ಎಲ್ಲಾ ಬಂದ್‌..
ಭುವನೇಶ್ವರ್‌ , ಭಾನುವಾರ, 13 ಅಕ್ಟೋಬರ್ 2013 (09:37 IST)
PTI
PTI
ಒಡಿಶಾ ಮತ್ತು ಅಂಧ್ರದಲ್ಲಿ ಎಲ್ಲವೂ ಬಂದ್‌ ಆಗಿದೆ. ಚಂಡ ಮಾರುತದ ಅಬ್ಬರಕ್ಕೆ ನಲುಗಿದ ತೀರ ಪ್ರದೇಶಗಳಲ್ಲಿ ಇದೀಗ ಸ್ಮಶಾನ ಮೌನ ಎದ್ದು ಕಾಣುತ್ತಿದೆ. ಎತ್ತ ಕಣ್ಣು ಹಾಯಿಸಿದರೂ, ರಸ್ತೆಗಳಲ್ಲಿಯೇ ವಾಹನಗಳು ನಿಂತು ಬಿಟ್ಟಿವೆ. ವಿಮಾನಗಳು ಸ್ಥಬ್ಧವಗಿವೆ. ಹಡಗುಗಳು ನೀರು ಬಿಟ್ಟು ನೆಲ ಸೇರಿವೆ. ಇಲ್ಲಿದೆ ಓಡಿಶಾ ಮತ್ತು ಆಂಧ್ರದ ಸ್ಮಶಾನ ಮೌನದ ಸಂಪೂರ್ಣ ಚಿತ್ರಣ..

ರೈಲು ಬಂದ್‌..!

ಚಂಡಮಾರುತದ ಕಾರಣದಿಂದಾಗಿ ಹೌರಾ ಹಾಗೂ ವಿಶಾಖಪಟ್ಟಣಂ ಮಾರ್ಗದಲ್ಲಿ ಸಂಚರಿಸುವ 56 ರೈಲುಗಳ ಸಂಚಾರಗಳನ್ನು ರದ್ದುಪಡಿಸಲಾಗಿತ್ತು.

ರಸ್ತೆ ಬಂದ್‌..!

ನೆನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಒಡಿಶಾದ ಭುವನೇಶ್ವರ, ಗೋಪಾಲಪುರ ಮೂಲಕ ಸಾಗುವ ಚೆನ್ನೈ- ಕೋಲ್ಕತ್ತ ರಾಷ್ಟ್ರೀಯ ಹೆದ್ದಾರಿ 5 ರಲ್ಲಿ ಟ್ರಕ್‌ಗಳು ಸೇರಿದಂತೆ ಎಲ್ಲಾ ವಾಹನಗಳು ಮೈಲುಗಟ್ಟಲೆ ನಿಂತಿದ್ದವು.

ವಿಮಾನ, ಹಡಗು ಸೇರಿದಂತೆ ಎಲ್ಲೆಲ್ಲೂ ಬಂದ್‌ ಬಂದ್‌ ಬಂದ್.... ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ...

webdunia
PTI
PTI
ವಿಮಾನ ಬಂದ್‌..!

ನೆನ್ನೆ ರಾತ್ರಿಯ ಸಮಯದಲ್ಲಿ ಚಂಡ ಮಾರುತದ ಅಬ್ಬರದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಇಲ್ಲಿನ ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ. ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಚಂಡ ಮಾರುತ ದೌರ್ಬಲ್ಯಗೊಂಡ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಪುನರ್‌ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ. ಅದರೂ, ಯಾವ ಸಮಯದಲ್ಲಿ ಬೇಕಾದರೂ ವಿಮಾನ ಹಾರಾಟ ಸ್ಥಗಿತ ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
500 ಟನ್‌ಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಮಾನವೂ ಕೂಡ ಭುವನೇಶ್ವರದಲ್ಲಿ ಸ್ಥಬ್ಧವಾಗಿ ನಿಂತಿದೆ.

ಬಂದರು ಬಂದ್‌..!

ರಾಷ್ಟ್ರದ 12 ಪ್ರಮುಖ ಬಂದರುಗಳಲ್ಲಿ ಒಂದಾದ ಒಡಿಶಾದ ಪಾರಾದೀಪ್‌ ಬಂದರನ್ನು ನೆನ್ನೆ ಸಂಪೂರ್ಣವಗಿ ಮುಚ್ಚಲಾಗಿತ್ತು. ಎಲ್ಲಾ ಹಡಗುಗಳನ್ನೂ ಅಲ್ಲಿಂದ ತೆರವುಗೊಳಿಸಲಾಗಿದೆ.

Share this Story:

Follow Webdunia kannada