Select Your Language

Notifications

webdunia
webdunia
webdunia
webdunia

ಹಾಡಹಗಲೇ ಜೆಮಿನಿ ಫ್ಲೈಓವರ್‌ನಿಂದ ಹಾರಿ ಯುವತಿಯ ಆತ್ಮಹತ್ಯೆ

ಹಾಡಹಗಲೇ ಜೆಮಿನಿ ಫ್ಲೈಓವರ್‌ನಿಂದ ಹಾರಿ ಯುವತಿಯ ಆತ್ಮಹತ್ಯೆ
ಚೆನ್ನೈ , ಬುಧವಾರ, 18 ಸೆಪ್ಟಂಬರ್ 2013 (19:52 IST)
PR
26 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಜೆಮಿನಿ ಫ್ಲೈಓವರ್ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಕೋಲ್ಕತಾ ಮೂಲದ ಅಂಜಲಿ ಎನ್ನುವ ಯುವತಿಯೊಬ್ಬಳು ಪ್ರಿಯಕರನೊಂದಿಗೆ ನಡೆದ ವಾಗ್ವಾದದ ನಂತರ ಜೆಮಿನಿ ಫ್ಲೈಓವರ್‌‌ನಿಂದ ಹಾರಿ ಸಾವನ್ನಪ್ಪಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಂಜಲಿ ಟಿ-ನಗರದಲ್ಲಿರುವ ಬ್ಯೂಟಿ ಪಾರ್ಲರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಆಕೆಗೆ ಐದು ವರ್ಷ ವಯಸ್ಸಿನ ಮಗುವಿದ್ದು, ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಅಂಜಲಿ ಸಹೋದರ ರವಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಮೃತ ಅಂಜಲಿ ದೇಹವನ್ನು ಪೋಸ್ಟ್‌ಮಾರ್ಟ್‌ಮ್‌ಗಾಗಿ ರಾಯಪೇಟ್‌ನಲ್ಲಿರುವ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada