Webdunia - Bharat's app for daily news and videos

Install App

ಹಲವು ವರ್ಷಗಳಿಂದ ಪುತ್ರಿಯಮೇಲೆ ನಿರಂತರ ಅತ್ಯಾಚಾರವೆಸಗಿದ ಕಾಮುಕ ತಂದೆ

Webdunia
ಶನಿವಾರ, 5 ಏಪ್ರಿಲ್ 2014 (13:36 IST)
ಮೆರಠ್: ಉತ್ತರ ಪ್ರದೇಶದ ಮೆರಠ್ ಜಿಲ್ಲೆಯಲ್ಲಿ ತಂದೆಯೇ ಮಗಳ ಮೇಲೆ ನಿರಂತರವಾಗಿ ರೇಪ್‌ ಮಾಡಿದ್ದಲ್ಲದೇ ಹಲವು ವರ್ಷಗಳಿಂದ ಪತ್ನಿಯಂತೆ ಇಟ್ಟುಕೊಂಡಿದ್ದ ಕಾಮುಕ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಥಾನಾ ಲಿಸಾಡಿ ಗೇಟ್‌ ಬಡಾವಣೆಯಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡ 40 ವರ್ಷದ ವ್ಯಕ್ತಿ ತನ್ನ 16 ವರ್ಷದ ಮಗಳ ಮೇಲೆ ನಿರಂತರ ರೇಪ್ ಮಾಡಿದ್ದಾನೆ. ಈ ಕುರಿತು ಬಾಲಕಿ, ತನ್ನ ತಂದೆಯ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಪರಾರಿಯಾದ ತಂದೆಯನ್ನು ಪೋಲಿಸರು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತನ್ನ ತಂದೆ ಹೆದರಿಸಿ ನಿರಂತರವಾಗಿ ಹಲವು ವರ್ಷಗಳಿಂದ ನನ್ನೊಂದಿಗೆ ಸೆಕ್ಸ್‌ನಲ್ಲಿ ತೊಡಗಿದ್ದ ಎಂದು ಬಾಲಕಿ ಪೋಲಿಸರಿಗೆ ತಿಳಿಸಿದ್ದಾರೆ. ನನ್ನನ್ನು ಮನೆ ಹೊರಗಡೆ ಕೂಡ ಕಳುಹಿಸುತ್ತಿರಲಿಲ್ಲ ಎಂದು ಬಾಲಕಿ ತಿಳಿಸಿದ್ದಾಳೆ. ಬಾಲಕಿಯ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕು ಮೊದಲು ಗ್ರಾಮದಲ್ಲಿ ಪಂಚಾಯತಿ ನಡೆದಿತ್ತು. ಹೆಂಡತಿಯ ಹಾಗೆ ಮಗಳನ್ನು ಇಟ್ಟುಕೊಂಡು ಗ್ರಾಮ ಬಿಟ್ಟು ತೆರಳುವಂತೆ ಗ್ರಾಮಪಂಚಾಯಿತಿ ಮುಖಂಡರು ಸೂಚಿಸಿದ್ದರು ಎನ್ನುವ ವರದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಓಂಕಾರ್ ಸಿಂಗ್ ತಳ್ಳಿಹಾಕಿದ್ದಾರೆ.

ಆರೋಪಿಯನ್ ಹುಡುಕಲು ಪೋಲಿಸ್ ಇಲಾಖೆ ವಿಶೇಷ ತಂಡಗಳನ್ನು ರಚಿಸಿದೆ ಎಂದು ಪೋಲಿಸ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ .

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments