Webdunia - Bharat's app for daily news and videos

Install App

ಹಣ ಗುಳುಂ ಆರೋಪ : ಮಹಿಳಾ ಐಎಎಸ್‌ ಅಧಿಕಾರಿಗೆ 5 ವರ್ಷ ಜೈಲು, 50 ಲಕ್ಷ ದಂಡ.

Webdunia
ಶನಿವಾರ, 28 ಸೆಪ್ಟಂಬರ್ 2013 (13:14 IST)
PTI
PTI
ಹಿರಿಯ ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರಿಗೆ ಮಧ್ಯಪ್ರದೇಶದ ಸ್ಥಳೀಯ ನ್ಯಾಯಾಲಯವು ಐದು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ 50 ಲಕ್ಷ ರೂಪಾಯಿಗಳನ್ನು ದಂಡ ವಿಧಿಸುವುದರ ಮೂಲಕ ಮಹತ್ತರವಾದ ತೀರ್ಪನ್ನು ಮಧ್ಯಪ್ರದೇಶದ ನ್ಯಾಯಾಲಯ ನೀಡಿದೆ.

1999-2000 ರಲ್ಲಿ 34 ಲಕ್ಷ ರೂಪಾಯಿಗಳ ಮುದ್ರಣ ಮತ್ತು ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಶಶಿ ಕರ್ಣಾವತ್‌ ಅವರಿಗೆ ನ್ಯಾಯಾಲಯ ಬಂಧನದ ವಾರೆಂಟ್‌ ಹೊರಡಿಸಿದೆ. ಶಶಿ ಕರ್ಣಾವತ್‌ ಅವರು 1999 - 2000 ರಲ್ಲಿ ಯಾವುದೇ ರೀತಿಯ ಟೆಂಡರ್‌‌ ಕರೆಯದೇ, ಮುದ್ರಣ ಮತ್ತು ಖರೀದಿ ಹಕ್ಕನ್ನು ಪ್ರಭಾವಿಗಳಿಗೆ ನೀಡಲಾಗಿತ್ತು.

ಶಶಿ ಕರ್ಣಾವತ್‌ ಅವರು ಪ್ರಸ್ತುತವಾಗಿ ಕ್ರೀಡಾ ಇಲಾಖೆಯಲ್ಲಿ ಉಪ ಕಾರ್ಯದಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ 1999-2000 ರಲ್ಲಿ ಮಂಡ್ಲಾ ಜಿಲ್ಲಾ ಪಂಚಾಯಿತಿಯ ಸಿಇಒ ಆಗಿದ್ದಾಗ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮುದ್ರಣ ಮತ್ತು ಖರೀದಿ ಹಕ್ಕನ್ನು ಯಾವುದೇ ಟೆಂಡರ್‌ ಕರೆಯದೇ, ನೀಡಲಾಗಿತ್ತು. ಹೀಗಾಗಿ ಶಶಿ ಕರ್ಣಾವತ್‌ ಅವರಿಗೆ 5 ವರ್ಷಗಳ ಕಾಲ ಕಠಿಣ ಶಿಕ್ಷೆಯ ಜೊತೆಗೆ 50 ಲಕ್ಷ ರೂಪಾಯಿಗಳ ದಂಡವನ್ನು ನ್ಯಾಯಾಲಯವು ವಿಧಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments