Webdunia - Bharat's app for daily news and videos

Install App

ಸ್ತ್ರೀಯರಿಗೆ ಅಪಮಾನ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ

Webdunia
ಗುರುವಾರ, 24 ಮಾರ್ಚ್ 2011 (09:20 IST)
ಜಾಹೀರಾತುಗಳಲ್ಲಿ, ಮಾಧ್ಯಮಗಳಲ್ಲಿ, ಅಂತರ್ಜಾಲದಲ್ಲಿ ಅಥವಾ ಮೊಬೈಲುಗಳಲ್ಲಿ ಸ್ತ್ರೀಯರಿಗೆ ಅಪಮಾನವಾಗುವ ರೀತಿಯ ಯಾವುದೇ ದೃಶ್ಯಗಳು, ಧ್ವನಿಮುದ್ರಿಕೆಗಳು, ಸಾಹಿತ್ಯಗಳು ಪ್ರಕಟ ಅಥವಾ ಪ್ರಸಾರವಾದಲ್ಲಿ, ಅಂಥವರಿಗೆ ಭಾರೀ ದಂಡ ಮತ್ತು ಕಠಿಣ ಶಿಕ್ಷೆಯನ್ನು ನೀಡುವ ಚಿಂತನೆಯನ್ನು ಕೇಂದ್ರ ಸರಕಾರ ನಡೆಸುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಚಿಂತನೆಯಲ್ಲಿದೆ. ಅದು ಜಾರಿಗೆ ಬಂದರೆ ಮಹಿಳೆಯರನ್ನು ಕಾನೂನು ಬಾಹಿರವಾಗಿ ಯಾವುದೇ ರೀತಿಯಲ್ಲಿ ತೋರಿಸುವುದು ದಂಡನಾರ್ಹ ಅಪರಾಧವೆನಿಸುತ್ತದೆ.

ಮೊಬೈಲುಗಳಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಬರಹ ರೂಪದ ಸಂದೇಶಗಳು ಅಥವಾ ಚಿತ್ರಸಂದೇಶಗಳು ಅಥವಾ ವೀಡಿಯೋ ಸಂದೇಶಗಳನ್ನು ಸೃಷ್ಟಿಸಿ ಅಥವಾ ಇತರರಿಂದ ಬಂದವುಗಳನ್ನು ಇತರರಿಗೆ ಫಾರ್ವರ್ಡ್ ಮಾಡುವುದು ಅಥವಾ ಕಳುಹಿಸುವುದು, ಜಾಹೀರಾತುಗಳಲ್ಲಿ ಮಹಿಳೆಯರನ್ನು ಕೆಟ್ಟದಾಗಿ ತೋರಿಸುವುದು, ಎಲ್ಲಾ ರೀತಿಯ ಮಾಧ್ಯಮಗಳಲ್ಲಿ (ಬ್ಲಾಗುಗಳೂ ಸೇರಿದಂತೆ) ಮಹಿಳೆಯರ ಬಗ್ಗೆ ಅಪಮಾನಕಾರಿ ಬರಹ ಅಥವಾ ವೀಡಿಯೋ ಪ್ರಸಾರ ಮುಂತಾದುವುದು ಈ ಕಾಯ್ದೆಯ ಅಡಿಯಲ್ಲಿ ಬರುತ್ತವೆ.

ಇಂತಹ ತಪ್ಪು ಮಾಡಿ ಅಪರಾಧಿ ಎಂದು ಸಾಬೀತಾದರೆ ವ್ಯಕ್ತಿಯೊಬ್ಬನಿಗೆ 2,000 ರೂಪಾಯಿಗಳಿಂದ 50,000 ರೂಪಾಯಿಗಳವರೆಗೆ ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಎರಡನೇ ಬಾರಿ ಅದೇ ತಪ್ಪನ್ನು ಮಾಡಿದಲ್ಲಿ ಶಿಕ್ಷೆಯನ್ನು ಐದು ವರ್ಷಗಳವರೆಗೆ ಮತ್ತು ದಂಡವನ್ನು ಐದು ಲಕ್ಷದವರೆಗೆ ಹೆಚ್ಚಳ ಮಾಡಬಹುದು.

ಎಲ್ಲಾ ರೀತಿಯ ವಿಚಾರಗಳು ಒಳಗೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಮತ್ತು ಅದನ್ನು ಜಾರಿಗೆ ತರಲಾಗುತ್ತದೆ ಎಂದು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಕೃಷ್ಣ ತಿರಾತ್ ತಿಳಿಸಿದ್ದಾರೆ.

ಕಾಯ್ದೆಯ ಬಗ್ಗೆ ಎಲ್ಲಾ ಸಚಿವಾಲಯಗಳ ಅಭಿಪ್ರಾಯ ಪಡೆದುಕೊಳ್ಳಲಾಗುತ್ತದೆ. ಬಳಿಕ ಸಲಹೆಗಳು ಬಂದರೆ ಸೂಕ್ತ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ನಂತರ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂದು ಅವರು ಹೇಳಿದ್ದು, ಸ್ತ್ರೀಯರನ್ನು ಗೌರವದಿಂದ ಕಾಣಲು ಸಹಕಾರವಾಗುವ ಎಲ್ಲಾ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದು ಭರವಸೆ ನೀಡಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments