Select Your Language

Notifications

webdunia
webdunia
webdunia
webdunia

ಸೋನಿಯಾ, ರಾಹುಲ್‌‌ರ ಬಟ್ಟೆಗಳನ್ನು ಕಳಚಿ ಇಟಲಿಗೆ ಕಳುಹಿಸಬೇಕು: ಬಿಜೆಪಿ ಶಾಸಕ

ಸೋನಿಯಾ, ರಾಹುಲ್‌‌ರ ಬಟ್ಟೆಗಳನ್ನು ಕಳಚಿ ಇಟಲಿಗೆ ಕಳುಹಿಸಬೇಕು: ಬಿಜೆಪಿ ಶಾಸಕ
ನವದೆಹಲಿ , ಸೋಮವಾರ, 31 ಮಾರ್ಚ್ 2014 (16:10 IST)
ಈ ಚುನಾವಣೆಯ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳ ವೈಯಕ್ತಿಕ ದಾಳಿ ಮತ್ತು ದ್ವೇಷದ ಭಾಷಣಗಳು ಜೋರಾಗುತ್ತಿವೆ. ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಗೆ, ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಸಾವಿನ ಬೆದರಿಕೆ ನೀಡಿದ ನಂತರ, ಈಗ ಬಿಜೆಪಿ ಶಾಸಕರೊಬ್ಬರು ಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
PTI

ರಾಜಸ್ಥಾನದ ಟೋಂಕ್ ಕ್ಷೇತ್ರದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಶಾಸಕ ಹೀರಾಲಾಲ್ ರೇಗರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಬಟ್ಟೆಗಳನ್ನು ಕಳಚಿ ಇಟಲಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕನ ಈ ಆಕ್ಷೇಪಾರ್ಹ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ತರುವಾಯ ಸಿಎನ್ಎನ್- ಐಬಿಎನ್ ಜತೆ ಮಾತನಾಡಿದ , ಹೀರಾಲಾಲ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. " ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಸಲಾಗಿದೆ. ನಾನು ಯಾವುದೇ ಹೆಸರು ತೆಗೆದುಕೊಂಡಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada