Webdunia - Bharat's app for daily news and videos

Install App

ಸುಳ್ಳು ಹೇಳಿದ ಚಿದಂಬರಂ ರಾಜೀನಾಮೆ ನೀಡಲಿ: ಬಿಜೆಪಿ

Webdunia
ಗುರುವಾರ, 3 ಮಾರ್ಚ್ 2011 (15:01 IST)
ಭ್ರಷ್ಟಾಚಾರ ಕಳಂಕಿತ ಪಿ.ಜೆ.ಥಾಮಸ್ ಅವರನ್ನು ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ಕೇಂದ್ರ ಜಾಗೃತ ದಳ (ಸಿವಿಸಿ)ಗೆ ಮುಖ್ಯಸ್ಥರಾಗಿ ಆಯ್ಕೆ ಮಾಡಿರುವುದನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟು ಆದೇಶ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ಬಿಜೆಪಿ, ಈ ತೀರ್ಪು ಭ್ರಷ್ಟಾಚಾರ ವಿರುದ್ಧದ ಐತಿಹಾಸಿಕ ವಿಜಯವಾಗಿದ್ದು, ಗೃಹ ಸಚಿವ ಪಿ.ಚಿದಂಬರಂ ಅವರು ನೈತಿಕ ಹೊಣೆ ಹೊತ್ತು ಪದತ್ಯಾಗ ಮಾಡಬೇಕು ಎಂದು ಆಗ್ರಹಿಸಿದೆ.

ಜವಾಬ್ದಾರಿಯುತ ಗೃಹ ಸಚಿವರಾಗಿ ಅವರು ಸುಪ್ರೀಂ ಕೋರ್ಟಿಗೆ ಸತ್ಯಾಂಶದಿಂದ ಕೂಡಿದ ಮಾಹಿತಿ ನೀಡಬೇಕಿತ್ತು. ಆದರೆ ಅವರು ಸತ್ಯ ಮುಚ್ಚಿಟ್ಟರು ಎಂದು ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಗುರುವಾರ ಆಗ್ರಹಿಸಿದರು.

ಪ್ರಧಾನಿ, ಸೋನಿಯಾಗೆ ಹೊಡೆತ
ಈ ತೀರ್ಪು ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಸರಕಾರ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬಲುದೊಡ್ಡ ಹೊಡೆತ ಎಂದು ಕೂಡ ಬಿಜೆಪಿ ನಾಯಕರು ಬಣ್ಣಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಡಿ, ಕಳಂಕಿತರನ್ನು ಕಿತ್ತು ಹಾಕಲು ಕೊನೆಗೂ ಸುಪ್ರೀಂ ಕೋರ್ಟ್ ಆದೇಶವನ್ನೇ ನೀಡಬೇಕಾಯಿತು. ಇದು ಬಿಜೆಪಿಯ ನಿಲುವನ್ನು ಎತ್ತಿ ಹಿಡಿದಂತಾಗಿದೆ. ನಮ್ಮ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಸಿವಿಸಿ ನೇಮಕಾತಿಯ ಸಮಿತಿಯಲ್ಲಿ ಮಾಡಿದ್ದ ವಿರೋಧಕ್ಕೆ ಕೊನೆಗೂ ಸುಪ್ರೀಂ ಕೋರ್ಟಿನಲ್ಲಿ ಜಯ ದೊರೆತಿದೆ ಎಂದರು.

ಐತಿಹಾಸಿಕ ಎಂದ ಸುಷ್ಮಾ
ಸುಪ್ರೀಂ ಕೋರ್ಟು ನಿರ್ಧಾರವು ಸಿವಿಸಿ ಎಂಬ ಸಾಂವಿಧಾನಿಕ ಹುದ್ದೆಯ ಪ್ರತಿಷ್ಠೆಯನ್ನು ಪುನಃಸ್ಥಾಪಿಸಿದೆ ಎಂದು ಹೇಳಿರುವ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಇದನ್ನು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದ್ದಾರೆ.

ಸಿವಿಸಿ ನೇಮಕಾತಿಗಾಗಿ ನಿಯಮಿಸಲಾಗಿದ್ದ ಉನ್ನತಾಧಿಕಾರ ಸಮಿತಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವ ವಹಿಸಿದ್ದರೆ, ಸುಷ್ಮಾ ಮತ್ತು ಗೃಹ ಸಚಿವ ಪಿ.ಚಿದಂಬರಂ ಸದಸ್ಯರಾಗಿದ್ದರು.

ಸಿವಿಸಿ ರಾಜೀನಾಮೆ
ಈ ಮಧ್ಯೆ, ಇದುವರೆಗೆ ನಾನೇಕೆ ಹುದ್ದೆ ಬಿಡಲಿ ಎನ್ನುತ್ತಿದ್ದ ಪಿ.ಜೆ.ಥಾಮಸ್ ಅವರು, ಕೊನೆಗೂ ಸುಪ್ರೀಂ ಕೋರ್ಟು ತೀರ್ಪಿಗೆ ತಲೆ ಬಾಗಿದ್ದು, ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಸರಕಾರವು ಸುಪ್ರೀಂ ಕೋರ್ಟ್ ಆದೇಶಕ್ಕೆ ಮನ್ನಣೆ ನೀಡಲೇಬೇಕು ಎಂದು ಒಪ್ಪಿಕೊಂಡಿದ್ದಾರೆ ಮೊಯ್ಲಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

Show comments