Select Your Language

Notifications

webdunia
webdunia
webdunia
webdunia

ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ತೀರ್ಥಯಾತ್ರೆಗೆ ತೆರಳಿದ ಮೋದಿ ಪತ್ನಿ

ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ತೀರ್ಥಯಾತ್ರೆಗೆ ತೆರಳಿದ ಮೋದಿ ಪತ್ನಿ
ಅಹಮದಾಹಾದ್ , ಶುಕ್ರವಾರ, 11 ಏಪ್ರಿಲ್ 2014 (09:40 IST)
ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ತಾನು ವಿವಾಹಿತ ಎಂದು ಮೋದಿ ಒಪ್ಪಿಕೊಂಡಿದ್ದರಿಂದ, ಮಾಧ್ಯಮಗಳೆಲ್ಲ ಈಗ ಮೋದಿಯ ಪತ್ನಿಯ ಸಂದರ್ಶನಕ್ಕಾಗಿ ಹೆಣಗಾಡುತ್ತಿದ್ದಾರೆ. ಹೀಗಾಗಿ ಮಾಧ್ಯಮದವರ ಕಣ್ಣಿಂದ ತಪ್ಪಿಸಿಕೊಳ್ಳಲು ಮೋದಿ ಪತ್ನಿ ಜಸೋಧಾ ಬೆನ್ ಚಾರ್‌ಧಾಮ್ ತೀರ್ಥಯಾತ್ರೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
PTI

ನಿವೃತ್ತ ಶಿಕ್ಷಕಿಯಾಗಿರುವ ಅವರು ಪುಣ್ಯಕ್ಷೇತ್ರಗಳಾದ ಬದ್ರಿನಾಥ್, ದ್ವಾರಕಾ, ಪುರಿ ಮತ್ತು ರಾಮೇಶ್ವರಂ ದರ್ಶನಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಮೋದಿಯಿಂದ ದೂರವಾದ ನಂತರ ಪುನರ್ವಿವಾಹವಾಗದ ಆಕೆ ತನ್ನ ಸಹೋದರನ ಜತೆ ವಾಸಿಸುತ್ತಿದ್ದಾಳೆ. ಯಾವುದಕ್ಕೂ ಮೋದಿ ಬೆಂಬಲ ಬಯಸದೇ ಸ್ವಾವಲಂಬಿ ಬದುಕನ್ನು ನಡೆಸುತ್ತಿರುವ ಅವರು ಇತ್ತೀಚಿಗೆ ಮೋದಿ ತನ್ನನ್ನು ಪತ್ನಿ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರೆ ಸಾಕು ಎಂದು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದರು.

ಅಲ್ಲದೇ ಮೋದಿ ಒಂದಲ್ಲ ಒಂದು ದಿನ ದೇಶದ ಪ್ರಧಾನಿಯಾಗುತ್ತಾರೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದರು. ಮೋದಿ ಪ್ರಧಾನಿಯಾಗಲಿ ಎಂದು ಅವರು ಇತ್ತೀಚಿಗೆ ಉಪವಾಸವನ್ನು ಸಹ ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.

"ಮೋದಿ ನನ್ನ ಸಹೋದರಿಯನ್ನು ಪತ್ನಿ ಎಂದು ಒಪ್ಪಿಕೊಂಡಿರುವುದು ಬಹಳ ಆನಂದವನ್ನುಂಟು ಮಾಡಿದೆ" ಎಂದು ಯಶೋಧಾ ಬೆನ್ ಸಹೋದರ ಹೇಳಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada