Webdunia - Bharat's app for daily news and videos

Install App

ಸಾವಿತ್ರಿ ಪುನಃ ಸರ್ಕಸ್‌ನಲ್ಲಿ ಬಂಧಿ

Webdunia
ಮಂಗಳವಾರ, 4 ಸೆಪ್ಟಂಬರ್ 2007 (18:58 IST)
ಜಿಲ್ಲೆಯಲ್ಲಿ ಅಡ್ಡಾಡುತ್ತಿದ್ದ ಸಾವಿತ್ರಿ ಮತ್ತು ಸತ್ಯವಾನ ಪ್ರೇಮಿಗಳಿಗೆ ಭವಾನಿಪುರ ಗ್ರಾಮಸ್ಥರು ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ರಾಧಾ ಮತ್ತು ರುಕ್ಮಿಣಿ ಎಂದು ಹೆಸರಿಟ್ಟಿದ್ದಾರೆ. ಸಾವಿತ್ರಿ ಮತ್ತು ಸತ್ಯವಾನರು ಕಲಿಯುಗದ ಮಾನವ ಪ್ರೇಮಿಗಳಲ್ಲ.

ಪಳಗಿದ ಹೆಣ್ಣಾನೆ ಮತ್ತು ಕಾಡಿನಲ್ಲಿ ಸ್ವೇಚ್ಛೆಯಿಂದ ಬೆಳೆದ ಮದಗಜದ ನಡುವೆ ಹುಟ್ಟಿದ ನಿಜವಾದ ಪ್ರೀತಿ. ಆದರೆ ಸತ್ಯವಾನ, ಸಾವಿತ್ರಿಯ ಅಗಲಿಕೆ ಮಾತ್ರ ಈಗ ಅನಿವಾರ್ಯವಾಗಿದೆ. ಸರ್ಕಸ್ ಕಂಪೆನಿಯ ಆನೆ ಸಾವಿತ್ರಿ ದಟ್ಟಾರಣ್ಯದಲ್ಲಿ ಮದಗಜಗಳ ನಡುವೆ ಬದುಕಿರಬಲ್ಲದೇ?

ಹೀಗಾಗಿ ಮತ್ತೆ ಸರ್ಕಸ್‌ಗೆ ಹಿಂತಿರುಗಲಿದೆ. ವಿರಹದ ವೇದನೆ ಎರಡು ಆನೆಗಳನ್ನೂ ಕಾಡದಿರದು. ಸಾವಿತ್ರಿ ಸರ್ಕಸ್ ಡೇರೆಯಲ್ಲಿದ್ದಾಗ ಸತ್ಯವಾನ್ ಸಲಗವು ಅದನ್ನು ಹೊರಗೆ ಬರುವಂತೆ ಪ್ರೇರೇಪಿಸಿತ್ತು.

" ಆನೆ ಪ್ರೇಮಿಗಳನ್ನು ಶೀಘ್ರದಲ್ಲೇ ಬೇರ್ಪಡಿಸಲಾಗುತ್ತದೆ. ಆದರೆ ಜಾರ್ಖಂಡ್‌ನ ದಾಲ್ಮಾ ವಲಯದಿಂದ ಅರಣ್ಯಕ್ಕೆ ಪ್ರವೇಶಿಸಿರುವ 40 ಆನೆಗಳ ಹಿಂಡಿಗೆ ಈ ಪ್ರೇಮಿಗಳು ಎದುರಾದರೆ ತೊಂದರೆ ತಪ್ಪಿದ್ದಲ್ಲ.

ಆನೆಗಳ ಹಿಂಡು ಪ್ರಸಕ್ತ ಸೊನಾಮುಖಿಯಲ್ಲಿ ಬೀಡುಬಿಟ್ಟಿದೆ. ಎದುರಿಗೆ ಸಿಕ್ಕ ಮಣ್ಣಿನ ಮನೆಗಳನ್ನು, ಬೆಳೆಗಳನ್ನು ಪುಡಿಗಟ್ಟಿದೆ" ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments