Select Your Language

Notifications

webdunia
webdunia
webdunia
webdunia

ಸಾವಿತ್ರಿ ಪುನಃ ಸರ್ಕಸ್‌ನಲ್ಲಿ ಬಂಧಿ

ಸಾವಿತ್ರಿ ಪುನಃ ಸರ್ಕಸ್‌ನಲ್ಲಿ ಬಂಧಿ
ಬಾಂಕುರಾ , ಮಂಗಳವಾರ, 4 ಸೆಪ್ಟಂಬರ್ 2007 (18:58 IST)
ಜಿಲ್ಲೆಯಲ್ಲಿ ಅಡ್ಡಾಡುತ್ತಿದ್ದ ಸಾವಿತ್ರಿ ಮತ್ತು ಸತ್ಯವಾನ ಪ್ರೇಮಿಗಳಿಗೆ ಭವಾನಿಪುರ ಗ್ರಾಮಸ್ಥರು ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ರಾಧಾ ಮತ್ತು ರುಕ್ಮಿಣಿ ಎಂದು ಹೆಸರಿಟ್ಟಿದ್ದಾರೆ. ಸಾವಿತ್ರಿ ಮತ್ತು ಸತ್ಯವಾನರು ಕಲಿಯುಗದ ಮಾನವ ಪ್ರೇಮಿಗಳಲ್ಲ.

ಪಳಗಿದ ಹೆಣ್ಣಾನೆ ಮತ್ತು ಕಾಡಿನಲ್ಲಿ ಸ್ವೇಚ್ಛೆಯಿಂದ ಬೆಳೆದ ಮದಗಜದ ನಡುವೆ ಹುಟ್ಟಿದ ನಿಜವಾದ ಪ್ರೀತಿ. ಆದರೆ ಸತ್ಯವಾನ, ಸಾವಿತ್ರಿಯ ಅಗಲಿಕೆ ಮಾತ್ರ ಈಗ ಅನಿವಾರ್ಯವಾಗಿದೆ. ಸರ್ಕಸ್ ಕಂಪೆನಿಯ ಆನೆ ಸಾವಿತ್ರಿ ದಟ್ಟಾರಣ್ಯದಲ್ಲಿ ಮದಗಜಗಳ ನಡುವೆ ಬದುಕಿರಬಲ್ಲದೇ?

ಹೀಗಾಗಿ ಮತ್ತೆ ಸರ್ಕಸ್‌ಗೆ ಹಿಂತಿರುಗಲಿದೆ. ವಿರಹದ ವೇದನೆ ಎರಡು ಆನೆಗಳನ್ನೂ ಕಾಡದಿರದು. ಸಾವಿತ್ರಿ ಸರ್ಕಸ್ ಡೇರೆಯಲ್ಲಿದ್ದಾಗ ಸತ್ಯವಾನ್ ಸಲಗವು ಅದನ್ನು ಹೊರಗೆ ಬರುವಂತೆ ಪ್ರೇರೇಪಿಸಿತ್ತು.

"ಆನೆ ಪ್ರೇಮಿಗಳನ್ನು ಶೀಘ್ರದಲ್ಲೇ ಬೇರ್ಪಡಿಸಲಾಗುತ್ತದೆ. ಆದರೆ ಜಾರ್ಖಂಡ್‌ನ ದಾಲ್ಮಾ ವಲಯದಿಂದ ಅರಣ್ಯಕ್ಕೆ ಪ್ರವೇಶಿಸಿರುವ 40 ಆನೆಗಳ ಹಿಂಡಿಗೆ ಈ ಪ್ರೇಮಿಗಳು ಎದುರಾದರೆ ತೊಂದರೆ ತಪ್ಪಿದ್ದಲ್ಲ.

ಆನೆಗಳ ಹಿಂಡು ಪ್ರಸಕ್ತ ಸೊನಾಮುಖಿಯಲ್ಲಿ ಬೀಡುಬಿಟ್ಟಿದೆ. ಎದುರಿಗೆ ಸಿಕ್ಕ ಮಣ್ಣಿನ ಮನೆಗಳನ್ನು, ಬೆಳೆಗಳನ್ನು ಪುಡಿಗಟ್ಟಿದೆ" ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

Share this Story:

Follow Webdunia kannada