Select Your Language

Notifications

webdunia
webdunia
webdunia
webdunia

ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಹೆಣ್ಣು ಗಂಡಾದ ವಿಚಿತ್ರ ಸುದ್ದಿ

ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಹೆಣ್ಣು ಗಂಡಾದ ವಿಚಿತ್ರ ಸುದ್ದಿ
ಮಾಸ್ಕೋ , ಗುರುವಾರ, 30 ಜನವರಿ 2014 (16:13 IST)
PR
ರಷ್ಯಾದ ಮಹಿಳೆಯಾದ ನಟಾಲಿಯಾಗೆ ಸಾಲದ ಭಾರ ಹೆಚ್ಚಾಗಿತ್ತು. ಸಾಲ ನೀಡಿದವರ ಕಾಟದಿಂದ ಹೇಗೆ ಪಾರಾಗಬೇಕು ಎನ್ನುವ ಯೋಚನೆ ಆಕೆಯ ತಲೆಯಲ್ಲಿ ಕೊರೆಯುತ್ತಿತ್ತು. ಕೊನೆಗೂ ಒಂದು ಐಡಿಯಾ ಹೊಳೆಯುತು.

38 ವರ್ಷ ವಯಸ್ಸಿನ ಮಹಿಳೆಯಾದ ನಟಾಲಿಯಾ ಯಾವ ದಾರಿಯನ್ನು ಕಾಣದೆ ಕೊನೆಗೆ ಲಿಂಗವನ್ನೇ ಬದಲಿಸುವ ಕಠಿಣ ನಿರ್ಧಾರ ತೆಗೆದುಕೊಂಡು ಪುರುಷನಾಗಿ ಬದಲಾದಳು.

ನಟಾಲಿಯಾ ಇದೀಗ ಆಂಡ್ರಿಯನ್ ಎಂದು ಬದಲಾಗಿ ಹೊಸ ಪಾಸ್‌ಪೋರ್ಟ್‌ನೊಂದಿಗೆ ಸಂಪೂರ್ಣವಾಗಿ ತನ್ನ ಎಲ್ಲಾ ವಿವರಗಳನ್ನು ಬದಲಾಯಿಸಿದ್ದಳು. ನಂತರ ಕೂಡಾ ಕೆಲವರಿಂದ ಸಾಲವನ್ನು ಪಡೆದಿದ್ದಳು.

ಹೆಣ್ಣಿಂದ ಪುರುಷನಾಗಿ ಬದಲಾದರೂ ಆಂಡ್ರಿನ್‌ಗೆ ಸಾಲಗಾರರ ಕಾಟ ತಪ್ಪಲಿಲ್ಲ. ಸಾಲಗಾರರು ಪೊಲೀಸ್ ಪ್ರಕರಣ ದಾಖಲಿಸಿದರು. ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆಂಡ್ರಿಯಾನ್‌ನನ್ನು ಕರೆಸಿ ವಿಚಾರಣೆ ನಡೆಸಿದರು.

ನಟಾಲಿಯಾ ಗಂಡಾಗಿ ತನ್ನ ಲಿಂಗವನ್ನು ಪರಿವರ್ತಿಸಿ ಸಾಲಗಾರರ ಕಾಟದಿಂದ ಮುಕ್ತವಾಗಬೇಕು ಎನ್ನುವ ತಂತ್ರ ರೂಪಿಸಿದ್ದಳು. ಆದರೆ, ಸಾಲಗಾರರಿಗೆ ಕಡ್ಡಾಯವಾಗಿ ಬಾಕಿಯನ್ನು ಹಿಂದುರಿಗಿಸಬೇಕು ಎಂದು ನ್ಯಾಯಾಲಯ ಆಂಡ್ರಿನ್‌ಗೆ ಆದೇಶ ನೀಡಿದೆ.

Share this Story:

Follow Webdunia kannada