Select Your Language

Notifications

webdunia
webdunia
webdunia
webdunia

ಸಶಕ್ತ ಲೋಕಪಾಲ್ ಮಸೂದೆಗೆ ಒತ್ತಾಯಿಸಿ ಅಣ್ಮಾ ಹಜಾರೆ ನಿರಶನ ಆರಂಭ

ಸಶಕ್ತ ಲೋಕಪಾಲ್ ಮಸೂದೆಗೆ ಒತ್ತಾಯಿಸಿ ಅಣ್ಮಾ ಹಜಾರೆ ನಿರಶನ ಆರಂಭ
ರಾಲೇಗಣ್ , ಮಂಗಳವಾರ, 10 ಡಿಸೆಂಬರ್ 2013 (13:43 IST)
PTI
ಸಶಕ್ತ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಹಿರಿಯ ಗಾಂಧಿವಾದಿ ಸಮಾಜ ಸುಧಾರಕ ಅಣ್ಣಾ ಹಜಾರೆ ಮತ್ತೆ ನಿರಶನ ಆರಂಭಿಸಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಸಶಕ್ತ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಹಜಾರೆ ಉಪವಾಸ ನಡೆಸುತ್ತಿರುವ ಮಹಾರಾಷ್ಟ್ರದ ಅಹ್ಮದ್‌ನಗರ್ ಜಿಲ್ಲೆಯ ರಾಲೇಗಣ್‌ನಲ್ಲಿ ತಾಪಮಾನ ಕುಸಿದಿದ್ದು, ಮೈ ಕೊರೆಯುವ ಚಳಿ ಆತಂಕ ಮೂಡಿಸಿದೆ.

ಇಂದು ಬೆಳಿಗ್ಗೆ ಎಂದಿನಂತೆ ವಾಕಿಂಗ್ ಮುಗಿಸಿ ಬಂದ ನಂತರ ಹಜಾರೆ ರಾಲೇಗಣ್‌ನಲ್ಲಿರುವ ಯಾದವ್ ಬಾಬಾ ಮಂದಿರದಲ್ಲಿ ನಿರಶನ ಆರಂಭಿಸಿದರು.

ಕಳೆದ ಒಂದು ವರ್ಷದಿಂದ ಲೋಕಪಾಲ ಮಸೂದೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರಕಾರ ಭರವಸೆ ನೀಡುತ್ತಲೇ ಇದೆ. ಆದರೆ, ಇಲ್ಲಿಯವರೆಗೆ ಜಾರಿಗೆ ತಂದಿಲ್ಲ. ಕಾಂಗ್ರೆಸ್ ಪಕ್ಷ ಜನರನ್ನು ವಂಚಿಸಿದೆ ಎಂದು ನಿರಶನಕ್ಕೂ ಮುನ್ನ ಅಣ್ಣಾ ಹಜಾರೆ ಮಾಧ್ಯಮದವರಿಗೆ ತಿಳಿಸಿದ್ದಾರೆ.

Share this Story:

Follow Webdunia kannada