Select Your Language

Notifications

webdunia
webdunia
webdunia
webdunia

ಸಲ್ಮಾನ್‌ ಖಾನ್‌ ಮೇಲೆ ದಾಖಲಾಯಿತು ಹೊಸ ಕೇಸ್‌

ಸಲ್ಮಾನ್‌ ಖಾನ್‌ ಮೇಲೆ ದಾಖಲಾಯಿತು ಹೊಸ ಕೇಸ್‌
ಮುಂಬೈ , ಶುಕ್ರವಾರ, 18 ಅಕ್ಟೋಬರ್ 2013 (15:25 IST)
PTI
PTI
ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ವಿರುದ್ಧ ಪೋಲೀಸರಿಗೆ ದೂರು ನೀಡಲಾಗಿದೆ. ಹಿಂದಿಯ ಜನಪ್ರಿಯ ರಿಯಾಲಿಟಿ ಶೋ "ಬಿಗ್‌ ಬಾಸ್‌ 7‌" ನೇ ಆವೃತ್ತಿಯಲ್ಲಿ ಸಲ್ಮಾನ್‌ ಖಾನ್‌ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ವರ್ತಿಸಿದ್ದರಿಂದ ಸಲ್ಮಾನ್‌ ಖಾನ್‌ ವಿರುದ್ಧ ಧಾರ್ಮಿಕ ಮುಖಂಡರು ದೂರು ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ನಟ ಅಮೀರ್‌ ಖಾನ್‌ ವಿರುದ್ಧವೂ ಇದೇ ರೀತಿಒಯ ದೂರನ್ನು ದಾಖಲಿಸಲಾಗಿತ್ತು.

ಹೇಮಂತ್‌ ಪಾಟೀಲ್‌ ಎಂಬುವವರು ಬಂದ್ರಾ ಮ್ಯಾಜಿಸ್ಟ್ರೇಟರ್‌ ಕೋರ್ಟ್‌‌ನಲ್ಲಿ ಇಂದು ಸಲ್ಮಾನ್ ಖನ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಿಗ್‌ ಬಾಸ್‌ ನಿರ್ಮಾಪಕರು, ನಿರೂಪಕರು ಸೇರಿದಂತೆ ರಿಯಾಲಿಟಿ ಶೋ ಮುಖ್ಯಸ್ಥರ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೇಸು ದಾಖಲಿಸಿದ್ದಾರೆ.

ಬಿಗ್‌ ಬಾಸ್‌ ಶೋನಲ್ಲಿ ಸ್ಪರ್ಧಿಗಳನ್ನು ದೇವತೆಗಳು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿತ್ತು. ಆದ್ರೆ ಇದರಲ್ಲಿ ಶಿವನಿಗೆ ಅವಮಾನವಾಗುವಂತೆ ವರ್ತಿಸಲಾಗಿದೆ ಎಂದು ಹೇಮಂತ್ ರೋಪಿಸಿದ್ರು.ಹೀಗಾಗಿ ಸಲ್ಮಾನ್ ಖಾನ್‌ ವಿರುದ್ಧ ಐಪಿಸಿ ಸೆಕ್ಷನ್ 295 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಮೊನ್ನೆಯಷ್ಟೇ ನಟ ಅಮೀರ್‌ ಖಾನ್‌ ವಿರುದ್ಧವೂ "ಧಾರ್ಮಿಕ ಭಾವನೆಗಳಿಗೆ ಧಕ್ಕೆ" ತಂದ ಆರೋಪದ ಮೇರೆಗೆ ಕೇಸು ದಾಖಲಿಸಲಾಗಿತ್ತು. ಇದಾದ ಎರಡು ಮೂರು ದಿನಗಳ ಒಳಗೆ ನಟ ಸಲ್ಮಾನ್‌ ಖಾನ್‌ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಹೊರಿಸಿ ಕೇಸು ದಾಖಲಿಸಲಾಗಿದೆ.

Share this Story:

Follow Webdunia kannada