Select Your Language

Notifications

webdunia
webdunia
webdunia
webdunia

ಸಮರ್ಪಕ ನಗರ ಯೋಜನೆಗೆ ರಾಷ್ಟ್ರಪತಿ ಸಲಹೆ

ಸಮರ್ಪಕ ನಗರ ಯೋಜನೆಗೆ ರಾಷ್ಟ್ರಪತಿ ಸಲಹೆ
ದೆಹಲಿ , ಶುಕ್ರವಾರ, 14 ಡಿಸೆಂಬರ್ 2007 (08:34 IST)
ಅಸಮರ್ಪಕ ನಗರ ಯೋಜನೆಗಳಿಗೆ ಬಹು ಏಜೆನ್ಸಿಗಳು ಕಾರಣ ಎಂದ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರದೇಶವೊಂದರ ಸಮಗ್ರ ಅಭಿವೃದ್ಧಿಗಾಗಿ ಬಹುವಿಧದ ಕೆಲಸಗಳನ್ನು ನೋಡಲ್ ಸಂಸ್ಥೆಗೆ ಒಪ್ಪಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ 50 ವರ್ಷಗಳ ಅಸ್ತಿತ್ವ ಕುರಿತ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

"ಉದಾಹರಣಗೆ ಹೇಳುವುದಾದರೆ, ಕಾನೂನು ವಿಚಾರವೆಂಬಂತೆ ರಸ್ತೆ ಮತ್ತು ಚರಂಡಿಗಳಂತಹ ಕಾಮಗಾರಿಗಳನ್ನು ಪ್ರತ್ಯೇಕವಾಗಿ ಕೈಗೊಳ್ಳಲಾಗುತ್ತದೆ, ವಿನಹ ಇವುಗಳನ್ನು ವಿನಾಯಿತಿಯಾಗಿ ಪರಿಗಣಿಸುವುದಿವಲ್ಲ, ಬಹುಶಃ ಇವುಗಳು ನಗರಾಡಳಿತ ಚೌಕಟ್ಟಿನಲ್ಲಿ ವಿವಿಧ ಸಂಘಟನೆಗಳ ಜವಾಬ್ದಾರಿಯಾಗಿರುವುದು ಇದಕ್ಕೆ ಕಾರಣವಿರಬಹುದು" ಎಂದು ಅವರು ಬೆಟ್ಟುಮಾಡಿದರು.

ಪ್ರದೇಶವೊಂದರ ಸಮಗ್ರ ಅಭಿವೃದ್ಧಿ ಚೌಕಟ್ಟನ್ನು ಅಳವಡಿಸಿಕೊಳ್ಳುವ ಮೂಲಕ ವಿವಿಧ ಮೂಲಸೌಕರ್ಯಗಳ ಗುರಿಯೊಂದಿಗೆ ಯೋಜನೆಗಳನ್ನು ಏಕ ನೋಡನ್ ಏಜೆನ್ಸಿ ಮೂಲಕ ಕೈಗೊಳ್ಳುವ ಮೂಲಕ ಈ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂಬ ಸಲಹೆಯನ್ನು ಅವರು ಈ ಸಂದರ್ಭದಲ್ಲಿ ಮಾಡಿದರು.

ದೆಹಲಿಯು ಭೂಕಂಪ ವಲಯವಾಗಿರುವ ಕಾರಣ, ಭೂಕಂಪ ಪ್ರತಿಬಂಧಕ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನೈಸರ್ಗಿಕ ದಾಳಿಗಳನ್ನು ಕಡಿಮೆಗೊಳಿಸಬೇಕು ಎಂದು ರಾಷ್ಟ್ರಪತಿ ಕರೆ ನೀಡಿದರು.

Share this Story:

Follow Webdunia kannada