Select Your Language

Notifications

webdunia
webdunia
webdunia
webdunia

ಸಚಿನ್‌ ಅವರಿಗೆ ಭಾರತರತ್ನ ನೀಡಿದ್ದು ಕಾನೂನು ಉಲ್ಲಂಘನೆ?

ಸಚಿನ್‌ ಅವರಿಗೆ ಭಾರತರತ್ನ ನೀಡಿದ್ದು ಕಾನೂನು ಉಲ್ಲಂಘನೆ?
ನವದೆಹಲಿ , ಭಾನುವಾರ, 17 ನವೆಂಬರ್ 2013 (15:58 IST)
PTI
PTI
ವಿಶೇಷ ವರದಿ : ಶೇಖರ್‌ ಪೂಜಾರಿ.

ಕಲೆ, ಸಾಹಿತ್ಯ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅತ್ಯುಚ್ಚ ಸೇವೆಯನ್ನು ಸಲ್ಲಿಸಿದವರಿಗೆ ಈ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆದ್ರೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇದುವರೆಗೂ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಭಾರತ ರತ್ನ ನೀಡಲು ಅವಕಾಶವಿಲ್ಲದಿದ್ದರೂ ಸಚಿನ್‌ ಅವರಿಗೆ ಭಾರತ ರತ್ನ ನೀಡಿರುವುದು ಸರಿಯಲ್ಲ ಎಂದು ಕೆಲವರು ವಾದಿಸುತ್ತಾರೆ.

ಅಷ್ಟೆ ಅಲ್ಲ, ಈ ಹಿಂದೆ ಸಚಿನ್‌ ತೆಂಡೂಲ್ಕರ್‌ ಮತ್ತು ನಟಿ ರೇಖಾ ಅವರು ಕಾಂಗ್ರೆಸ್‌ ಪಕ್ಷದ ವತಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಸಚಿನ್‌ ಮೇಲೆ ಹೆಚ್ಚಿನ ಒಲವು ಇದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾನೂನು, ನಿಯಮಗಳನ್ನು ಪಾಲಿಸದೇ, ಕೇವಲ ಒಂದೇ ಗಂಟೆಯಲ್ಲಿ ಸಚಿನ್‌ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿಬಿಟ್ಟಿದೆ. ಎಂಬ ಮಾತುಗಳು ಇದೀಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗುತ್ತಿದೆ.

ಸಚಿನ್‌ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಎಂದು ರಾಹುಲ್‌ ಗಾಂಧಿಯವರು ಪ್ರಧಾನಿಗೆ ಶಿಫಾರಸ್ಸು ಮಾಡಿದರು. ಇದದ ನಂತರ ಪ್ರಧಾನಿಯವರು ರಾಷ್ಟ್ರಪತಿಯವರಿಗೆ ಪತ್ರವನ್ನು ಬರೆದರು. ರಾಷ್ಟ್ರಪತಿಯವರಿಗೆ ಪತ್ರ ತಲುಪಿದ ಕೇವಲ ಅರ್ಧ ಗಂಟೆಯಲ್ಲಿಯೇ ಸಚಿನ್‌ ಅವರಿಗೆ ಭಾರತ ರತ್ನ ನೀಡಲಾಗಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯದಿಂದ ಅಧಿಕೃತವಾಗಿ ಘೋಷಣೆಯಾಗಿದೆ.

ಕ್ರೀಡಾ ಕ್ಷೇತ್ರದ ಸಾಧಕರಿಗೆ ಅರ್ಜುನ್ ಪ್ರಶಸ್ತಿ, ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಬಹದು. ಅದ್ರೆ ಭಾರತ ರತ್ನ ಕೇವಲ ಕಲೆ ಮತ್ತು ವಿಜ್ಞಾನ, ಸಾಹಿತ್ಯ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ನೀಡಬೇಕು ಎಂಬ ನಿಯಮವಿದೆ. ಹೀಗಿದ್ದರೂ ಸಚಿನ್ ಅವರಿಗೆ ಭಾರತ ರತ್ನ ನೀಡಿರುವುದು ಹಲವರಿಗೆ ಅನುಮಾನ ಉಂಟುಮಾಡಿದೆ.

ಆದ್ರೆ ಗಮನಿಸಿ : 2011 ರಲ್ಲಿ ಬಂದ ಹೊಸ ನಿಯಮ ಏನ್ ಹೇಳುತ್ತೆ ಗೊತ್ತಾ?

webdunia
PTI
PTI
ಆದ್ರೆ ಗಮನಿಸಿ : 2010 ರ ವರೆಗೆ ಭಾರತ ರತ್ನ ಪ್ರಶಸ್ತಿಯನ್ನು ಕೇವಲ ಕಲೆ, ವಿಜ್ಞಾನ, ಸಾಹಿತ್ಯ ಮತ್ತು ಸಮಾಜ ಸೆವೆ ಮಾಡಿದವರಿಗೆ ಮಾತ್ರವೇ ಸೀಮಿತವಾಗಿತ್ತು. ಆದ್ರೆ 2011ರಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸೇವೆ ಮಾಡಿದವರಿಗೂ ಈ ಭಾರತ ರತ್ನ ಪ್ರಶ್ತಿಯನ್ನು ನೀಡಬಹುದು ಎಂದು ಭಾರತ ಸರ್ಕಾರ ತೀರ್ಮಾನಿಸಿತ್ತು. ಅದರಂತೆಯೇ ಸಚಿನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಇದರಲ್ಲಿ ಯಾವುದೇ ರೀತಿಯ ಕಾನೂನು ದುರುಪಯೋಗ ಆಗಿಲ್ಲ.

ಕ್ರಿಕೆಟ್‌ ದೇವರ ಸಾಧನೆಗೆ ಭಾರತ ರತ್ನ ಪ್ರಶಸ್ತಿ ದಕ್ಕಿದೆ. ಆದ್ರೆ ಇದರಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ. ಆದ್ರೆ ರಾಹುಲ್ ಗಾಂಧಿಯವರ ಶೀಫಾರಸ್ಸಿನಿಂದ ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ಸಿಕ್ಕಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಕ್ರಿಕೆಟ್‌ ದೇವರಿಗೆ ನೀಡಲಾದ ಭಾರತ ರತ್ನ ಪ್ರಶಸ್ತಿಯನ್ನು ರಾಜಕೀಯಗೊಳಿಸುತ್ತಿರುವುದು ನಿಜಕ್ಕೂ ದೊಡ್ಡ ದುರಂತ..


Share this Story:

Follow Webdunia kannada