Select Your Language

Notifications

webdunia
webdunia
webdunia
webdunia

ಸಂಕಷ್ಟದಲ್ಲಿ ಶೀಲಾ ದಿಕ್ಷೀತ್ ? ಸಿ ಡಬ್ಲ್ಯೂ ಜಿ ಪ್ರಕರಣದ ತನಿಖೆಗೆ ಮುಂದಾಗಿರುವ ದೆಹಲಿ ಸರಕಾರ.

ಸಂಕಷ್ಟದಲ್ಲಿ ಶೀಲಾ ದಿಕ್ಷೀತ್ ? ಸಿ ಡಬ್ಲ್ಯೂ ಜಿ ಪ್ರಕರಣದ ತನಿಖೆಗೆ ಮುಂದಾಗಿರುವ ದೆಹಲಿ ಸರಕಾರ.
ನವದೆಹಲಿ , ಶನಿವಾರ, 8 ಫೆಬ್ರವರಿ 2014 (09:22 IST)
PR
ಕಾಮನ್ ವೇಲ್ತ್ ಗೇಮ್ಸ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಟ್ಟ ನಿರ್ಧಾರ ಕೈಗೊಂಡಿರುವ ದೆಹಲಿ ಸರಕಾರ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಗೆ ಈ ಕುರಿತು ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ.

ಕಾಮನ್ ವೇಲ್ತ್ ಗೇಮ್ಸ್ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಳವಡಿಸಿದ್ದ ಬೀದಿದೀಪಗಳ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೇಜ್ರಿವಾಲ್ ಸರಕಾರ ನಿರ್ಧರಿಸಿದೆ.

ಅಲ್ಪಸಂಖ್ಯಾತ ಆಪ್ ಪಕ್ಷ, ಕಾಂಗ್ರೆಸ್ ನ 8 ಮಂದಿ ಶಾಸಕರ ಬೆಂಬಲದೊಂದಿಗೆ ಸರಕಾರ ನಡೆಸುತ್ತಿದೆ.

ಕಾಮನ್ ವೇಲ್ತ್ ಗೇಮ್ಸ್ ಸಂದರ್ಭದಲ್ಲಿ ಅಳವಡಿಸಿದ್ದ ಬೀದಿದೀಪಗಳನ್ನು ಲೋಕೋಪಯೋಗಿ ಇಲಾಖೆ ಗುತ್ತಿಗೆ ಆಧಾರದ ಮೇಲೆ ಹೆಚ್ಚಿನ ಬೆಲೆಗೆ ಖರೀದಿಸಿತ್ತು. ಇದರಿಂದ ಸರಕಾರಕ್ಕೆ 31 ಕೋಟಿ ಮತ್ತು ಎಮ್ ಸಿ ಡಿಗೆ 15 ಕೋಟಿ ನಷ್ಟವಾಗಿತ್ತು.

ಈ ಮೊದಲು ದೆಹಲಿ ಕೋರ್ಟ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಮ್ ಸಿ ಡಿ ಅಧಿಕಾರಿಗಳಿಗೆ ಮತ್ತು ಸಂಸ್ಥೆಗೆ ದಂಡ ವಿಧಿಸಿತ್ತು. ಸರಕಾರ ನೇರವಾಗಿ ಶೀಲಾ ದಿಕ್ಷೀತ್ ವಿರುದ್ಧ ಕೇಸ್‌ನ್ನು ದಾಖಲಿಸಿಲ್ಲ. ಆದರೆ ಪ್ರೊಜೆಕ್ಟ್‌ಗೆ ಅನುಮತಿ ಕೊಟ್ಟಿದ್ದಕ್ಕೆ ಪ್ರಥಮ ಮಾಹಿತಿ ವರದಿಯಲ್ಲಿ ಅವರ ಹೆಸರು ಒಳಗೊಳ್ಳುವ ಸಾಧ್ಯತೆ ಇದೆ. ಇದು ಪ್ರಾಥಮಿಕ ವರದಿ ಬಂದ ನಂತರ ನಿರ್ಧಾರವಾಗಲಿದೆ.

ಬೀದಿದೀಪ ಪ್ರಕರಣ ಸಿಬಿಐ ತನಿಖೆಗೊಳಪಟ್ಟ 10 ಕಾಮನ್ ವೇಲ್ತ್ ಹಗರಣಗಳಲ್ಲಿ ಒಂದಾಗಿದೆ. ಶೀಲಾ ದಿಕ್ಷೀತ್ ಅವರ ಹೆಸರು ಪ್ರಥಮ ಮಾಹಿತಿ ವರದಿಯಲ್ಲಿ ನಮೂದಿತವಾದರೆ ಕಾಂಗ್ರೆಸ್
ಕೇಜ್ರಿವಾಲ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದು ಕೊಳ್ಳಬಹುದೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

Share this Story:

Follow Webdunia kannada