Webdunia - Bharat's app for daily news and videos

Install App

ಶೀಘ್ರದಲ್ಲಿ ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ: ಬಿಜೆಪಿ

Webdunia
ಬುಧವಾರ, 3 ಏಪ್ರಿಲ್ 2013 (12:21 IST)
PTI
ನವೆಂಬರ್‌ನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದರಿಂದ ಇದಕ್ಕೆ ಸಿದ್ಧರಾಗಲು ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್‌ ಇಲ್ಲಿ ಕರೆ ನೀಡಿದ್ದಾರೆ.

ನವೆಂಬರ್‌ನಲ್ಲಿ ಚುನಾವಣೆ ನಡೆಯಬಹುದು ಎಂದು ನನಗೆ ಅನಿಸುತ್ತಿದೆ. ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿದ್ದರೂ ಈಗಿನಿಂದಲೇ ನಾವು ತಯಾರಿ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅನಂತರ ಪಕ್ಷದ ಶಾಸಕರನ್ನು ಉದ್ದೇಶಿಸಿ ಸಿಂಗ್‌ ಮಾತನಾಡುತ್ತಿದ್ದರು.

ಮಹಾರಾಷ್ಟ್ರದಲ್ಲಿ ನಾವು 15 ವರ್ಷಗಳಿಂದ ಅಧಿಕಾರದಿಂದ ಹೊರಗಿದ್ದೇವೆ. ಒಂದು ಬಾರಿ ಅಧಿಕಾರಕ್ಕೆ ಬಂದಿದ್ದ ಪಕ್ಷ ನಿರಂತರವಾಗಿ ಸುಧೀರ್ಘ‌ ಕಾಲ ಅಧಿಕಾರದಿಂದ ಹೊರಗೆ ಉಳಿದರೆ ಭಾರೀ ಅಪಾಯಕಾರಿಯಾಗಿ ಪರಿಣಾಮಿಸಲಿದೆ ಎಂದು ನನಗೆ ಅನಿಸುತ್ತಿದೆ. ಬಿಜೆಪಿ ಇನ್ನು ಅಧಿಕಾರಕ್ಕೆ ಬಾರದು ಎಂದು ದೇಶದ ಜನರಲ್ಲಿ ಭಾವನೆ ಮೂಡಬಹುದು. ಪಕ್ಷವೊಂದು ಜನರ ವಿಶ್ವಾಸ ಕಳೆದುಕೊಂಡರೆ ಮರಳಿ ವಿಶ್ವಾಸ ಗಳಿಸುವುದು ಬಹಳ ಕಷ್ಟವಿದೆ ಎಂದು ಸಿಂಗ್‌ ನುಡಿದರು.

ಸರಕಾರ ಎಲ್ಲ ವಿಧದಲ್ಲೂ ವಿಫಲವಾಗಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಬದಲಾವಣೆಗೆ ಬಿಜೆಪಿ ಸಿದ್ಧವಿದೆಯೇ ಎಂದು ಜನರು ಕೇಳುತ್ತಿದ್ದಾರೆ ಎಂದರು.

ಇದೇವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು ಸರಕಾರವನ್ನು ಅಸ್ಥಿರಗೊಳಿಸಲು ನಾವು ಯತ್ನಿಸುವುದಿಲ್ಲ. ದೇಶದ ಜನರು ತೊಂದರೆಗೆ ಈಡಾಗುವುದರಿಂದ ಸರಕಾರವನ್ನು ಅಸ್ಥಿರಗೊಳಿಸಲು ಯಾವುದೇ ಪಕ್ಷ ಪ್ರಯತ್ನಿಸಬಾರದು ಎನ್ನುವುದು ನಮ್ಮ ಭಾವನೆಯಾಗಿದೆ. ಆದರೆ ಆಂತರಿಕ ಕಚ್ಚಾಟದಿಂದ ಸರಕಾರ ಪತನವಾದರೆ ಬಿಜೆಪಿಯನ್ನು ದೂಷಿಸುವುದು ಸಲ್ಲದು. ದೇಶದ ಹಿತಾಸಕ್ತಿಗಾಗಿ ಆದಷ್ಟು ಶೀಘ್ರದಲ್ಲಿ ಸರಕಾರ ಪತನವಾಗುವುದು ಉತ್ತಮ ಎಂದರು.

ಬರಪರಿಹಾರ ನಿಧಿಗೆ ಪಕ್ಷದ ರಾಜ್ಯ ಘಟಕದಿಂದ 25 ಲಕ್ಷ ರೂ. ದೇಣಿಗೆಯ ಚೆಕ್‌ ಅನ್ನು ಅವರು ನೀಡಿದರು. ಈ ಮೊತ್ತವನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಲು ಪಕ್ಷದ ನಾಯಕರಿಗೆ ಹೇಳಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments