Select Your Language

Notifications

webdunia
webdunia
webdunia
webdunia

ವಿಶ್ವಪರಂಪರೆ ಪಟ್ಟಿಗೆ ಕಲ್ಕಾ-ಶಿಮ್ಲಾ ರೈಲ್ವೇ?

ವಿಶ್ವಪರಂಪರೆ ಪಟ್ಟಿಗೆ ಕಲ್ಕಾ-ಶಿಮ್ಲಾ ರೈಲ್ವೇ?
ನ್ಯೂಯಾರ್ಕ್ , ಶನಿವಾರ, 21 ಜೂನ್ 2008 (11:55 IST)
ವಿಶ್ವಪರಂಪರೆ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯು ಪರಿಗಣಿಸಿರುವ 47 ತಾಣಗಳ ಪಟ್ಟಿಯಲ್ಲಿ ಕಲ್ಕಾ-ಶಿಮ್ಲಾ ರೈಲ್ವೆ ಮತ್ತು ಅಸ್ಸಾಮಿನ ಬ್ರಹ್ಮಪುತ್ರ ನದಿ ಮಧ್ಯದಲ್ಲಿರುವ ಮಜೌಲಿ ದ್ವೀಪ ಸೇರಿದೆ.

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ(ಯುನೆಸ್ಕೋ)ಯು, ಕೆನಡಾದ ಕ್ಯೂಬೆಕ್‌ನಲ್ಲಿ ಒಂಭತ್ತು ದಿನಗಳ ಸಭೆಯನ್ನು ಜುಲೈ ಎರಡರಿಂದ ನಡೆಸಲಿದ್ದು, 13 ನೈಸರ್ಗಿಕ ತಾಣಗಳು ಮತ್ತು 34 ಸಾಂಸ್ಕೃತಿಕ ತಾಣಗಳ ನಾಮನಿರ್ದೇಶನ ಪಟ್ಟಿಯನ್ನು ಪರಿಗಣಿಸಲಿದೆ. ನಾಮನಿರ್ದೇಶನಗೊಂಡಿರುವ ಎರಡು ತಾಣಗಳು ರಾಷ್ಟ್ರೀಯ ಗಡಿಗಳನ್ನು ದಾಟಿದವುಗಳಾಗಿವೆ.

ಅಲ್ಲದೆ, ಮಾಲಿನ್ಯ, ಸೂರೆ ಮತ್ತು ಪಕೃತಿ ವಿಕೋಪಗಳ ಕಾರಣದಿಂದ ಅಪಾಯದಲ್ಲಿರುವ ವಿಶ್ವಪರಂಪರೆ ಪಟ್ಟಿಗೆ ಸೇರಿರುವ ತಾಣಗಳನ್ನೂ ಸಮಿತಿಯು ಪರಿವೀಕ್ಷಣೆ ನಡೆಸಲಿದೆ ಎಂದು ಯುನೆಸ್ಕೋ ಹೇಳಿದೆ.

ಪ್ರಸಕ್ತ ವಿಶ್ವಪರಂಪರೆ ಪಟ್ಟಿಯಲ್ಲಿ 141 ರಾಷ್ಟ್ರಗಳ 851 ತಾಣಗಳಿವೆ. ಪ್ರತಿವರ್ಷವೂ ಹೊಸತಾಣಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ. ವಿಶ್ವಪರಂಪರೆ ಪಟ್ಟಿಗೆ ಸೇರ್ಪೆಡೆಗಾಗಿ ಸಲ್ಲಿಸುವ ಅರ್ಜಿಯನ್ನು ಸ್ಮಾರಕಗಳು ಮತ್ತು ತಾಣಗಳ ಅಂತಾರಾಷ್ಟ್ರೀಯ ಮಂಡಳಿ ಅಥವಾ ಪರಿಸರ ಸಂರಕ್ಷಣೆಯ ಅಂತಾರಾಷ್ಟ್ರೀಯ ಮಂಡಳಿಯು ಪರಿಶೀಲಿಸುತ್ತದೆ.

Share this Story:

Follow Webdunia kannada