Select Your Language

Notifications

webdunia
webdunia
webdunia
webdunia

ವಿದೇಶಿ ಹೂಡಿಕೆ ಮಾತ್ರ ಅರ್ಥವ್ಯವಸ್ಥೆ ಉಳಿಸೋಲ್ಲ : ತೃತೀಯ ರಂಗ ಅಭಿಮತ

ವಿದೇಶಿ ಹೂಡಿಕೆ ಮಾತ್ರ ಅರ್ಥವ್ಯವಸ್ಥೆ ಉಳಿಸೋಲ್ಲ : ತೃತೀಯ ರಂಗ ಅಭಿಮತ
, ಮಂಗಳವಾರ, 25 ಫೆಬ್ರವರಿ 2014 (11:31 IST)
PR
PR
ನವದೆಹಲಿ:ಕಾಂಗ್ರೆಸ್ ನೇತೃತ್ವದ ಅಥವಾ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಪರ್ಯಾಯವಾದ ತೃತೀಯ ರಂಗ ಸರ್ಕಾರಗಳು ಅಲ್ಪಕಾಲೀನ ಅನುಭವವಾಗಿದೆ. ಏಕೆಂದರೆ ಅಂಗ ಪಕ್ಷಗಳ ಮುಖಂಡರ ಪ್ರಧಾನಮಂತ್ರಿ ಮಹಾತ್ವಾಕಾಂಕ್ಷೆಗಳು ಇದಕ್ಕೆ ಕಾರಣವಾಗಿರುತ್ತದೆ. ಹಿಂದಿನ ಅನುಭವಗಳಿಂದ ಪಾಠ ಕಲಿತ ಎಡಪಕ್ಷಗಳು ನೇತಾಗಳಿಗೆ ಬದಲು ನೀತಿಗಳಿಗೆ ಕರೆ ನೀಡಿದೆ. ಇಂದು ಎಐಎಡಿಎಂಕೆ, ಸಮಾಜವಾದಿ ಪಕ್ಷ, ಜೆಡಿಯು ಮತ್ತು ಎಡಪಕ್ಷಗಳು ಸೇರಿದಂತೆ 11 ಕಾಂಗ್ರೆಸ್ಸೇತರ, ಬಿಜೆಪಿಯೇತರ ಪಕ್ಷಗಳು ದೆಹಲಿಯಲ್ಲಿ ಭೇಟಿ ಮಾಡಿ ಸಮಾನ ಕಾರ್ಯಕ್ರಮಗಳ ಪಟ್ಟಿಯನ್ನು ರೂಪಿಸಲಿದೆ.

webdunia
PR
PR
ಪಕ್ಷಗಳು ಕಾರ್ಯನಿರ್ವಹಿಸಲು ಮೂರು ವಿಶಾಲ ಕ್ಷೇತ್ರಗಳನ್ನು ಎಡಪಕ್ಷಗಳ ಮುಖಂಡರು ಮಂಡಿಸುತ್ತಾರೆಂದು ನಿರೀಕ್ಷಿಸಲಾಗಿದೆ. ಈ ಪ್ರಾದೇಶಿಕ ಪಕ್ಷಗಳು ಮತ್ತು ಎಡಪಕ್ಷಗಳಿಗೆ ಕೊಂಡಿ ಕಲ್ಪಿಸಿರುವ ಮುಖ್ಯ ವಸ್ತು ಕೋಮುವಾದ ಮತ್ತು ರಾಜಕೀಯ ಧ್ರುವೀಕರಣದ ವಿರುದ್ಧ ಹೋರಾಡುವ ವಿಷಯ. ಎಡಪಕ್ಷಗಳು ಪರ್ಯಾಯ ಆರ್ಥಿಕ ಮಾದರಿಯನ್ನು ಮಂಡಿಸಲಿದ್ದು, ಬೆಲೆ ಏರಿಕೆಯಿಂದ ಗ್ರಾಹಕರಿಗೆ ಪರಿಹಾರ ಒದಗಿಸುವುದರತ್ತ ಗಮನಹರಿಸಿದೆ.

webdunia
PR
PR
ಮೂಲಸೌಲಭ್ಯ ವಲಯದಲ್ಲಿ ಬಹುಪ್ರಮಾಣದ ಹೂಡಿಕೆಗಳ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಬೆಳವಣಿಗೆ ಸಾಧಿಸುವುದನ್ನು ಪರ್ಯಾಯ ಮಾದರಿಯಲ್ಲಿ ವಿವರಿಸಲಾಗುತ್ತದೆ.ಕೃಷಿ ಕ್ಷೇತ್ರದಲ್ಲಿ ಅಪಾರ ಸಾರ್ವಜನಿಕ ಹೂಡಿಕೆಗಳನ್ನು ಎಡಪಕ್ಷಗಳು ಬಯಸುತ್ತವೆ. ಭೂಸುಧಾರಣೆಗಳ ಖಾತರಿಗೆ ವೇಗದ ಗತಿಯ ಶಾಸನಗಳನ್ನು ಅದು ಬಯಸಿದೆ. ವಿದೇಶಿ ಹೂಡಿಕೆ ಮಾತ್ರ ಅರ್ಥವ್ಯವಸ್ಥೆಯನ್ನು ಉಳಿಸುತ್ತದೆ ಎಂಬ ಯುಪಿಎ ಅಥವಾ ಎನ್‌ಡಿಎ ಅಭಿಪ್ರಾಯವನ್ನು ನಾವು ಒಪ್ಪುವುದಿಲ್ಲ. ಈ ದೃಷ್ಟಿಕೋನವನ್ನು ನಾವೆಲ್ಲರೂ ಹೊಂದಿದ್ದೇವೆ ಎಂದು ಹಿರಿಯ ಎಡಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಆಡಳಿತದಲ್ಲಿ ಉತ್ತರದಾಯಿತ್ವ ಕಲ್ಪನೆಯನ್ನು ತರುವ ಕಡೆ ತೃತೀಯ ರಂಗ ಗಮನಹರಿಸುತ್ತದೆ. ಕಾಂಗ್ರೆಸ್‌ನ ಭ್ರಷ್ಟಾಚಾರ ವಿರೋಧಿ ಘೋಷಣೆಗೆ ಪ್ರತಿಯಾಗಿ ತೃತೀಯ ರಂಗ ಈ ಘೋಷಣೆ ಮಾಡಲಿದೆ.

Share this Story:

Follow Webdunia kannada