Select Your Language

Notifications

webdunia
webdunia
webdunia
webdunia

ವಿಚಿತ್ರ ಆದ್ರೂ ಸತ್ಯ..1 ಸಾವಿರ ರೂಪಾಯಿ ನೋಟು ಆನ್‌ಲೈನ್‌ನಲ್ಲಿ 3.5 ಲಕ್ಷಕ್ಕೆ ಮಾರಾಟ

ವಿಚಿತ್ರ ಆದ್ರೂ ಸತ್ಯ..1 ಸಾವಿರ ರೂಪಾಯಿ ನೋಟು ಆನ್‌ಲೈನ್‌ನಲ್ಲಿ 3.5 ಲಕ್ಷಕ್ಕೆ ಮಾರಾಟ
ನವದೆಹಲಿ , ಬುಧವಾರ, 20 ನವೆಂಬರ್ 2013 (14:57 IST)
PTI
ಬಹುಶಃ ನೀವು ಗಮನಿಸಿರಲಿಕ್ಕಿಲ್ಲ. ನಿಮ್ಮ ಕೈಯಿಂದ ವಿಶೇಷ ಸಂಖ್ಯೆಗಳುಳ್ಳ ನೂರಾರು ನೋಟುಗಳು ಬೇರೆಯವರಿಗೆ ಹೋಗಿರಬಹುದು. ಅಂತಹ ಒಂದು ನೋಟು ನಿಮಗೆ ಲಕ್ಷ ಲಕ್ಷ ರೂಪಾಯಿಗಳನ್ನು ತಂದುಕೊಡಬಹುದು ಎಂದು ನೀವು ಅಂದುಕೊಂಡಿರಲಿಕ್ಕಿಲ್ಲ.

ವಿಶೇಷ ಸಂಖ್ಯೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಅನೇಕ್ ವೆಬ್‌ಸೈಟ್‌ಗಳು ಮಾರುಕಟ್ಟೆಯಲ್ಲಿವೆ. ವಿಶೇಷ ಸಂಖ್ಯೆಯ ನೋಟುಗಳು, ತಪ್ಪು ಮದ್ರಿತ ಸಂಖ್ಯೆಯ ನೋಟುಗಳು, ಮಹತ್ವದ ವ್ಯಕ್ತಿಗಳ ಹಸ್ತಾಕ್ಷರ ಹೊಂದಿರುವ ನೋಟುಗಳು ಮತ್ತು ನಾಣ್ಯಗಳು ಲಕ್ಷ ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತವೆ.

ಆನ್‌ಲೈನ್ ವೆಬ್‌ಸೈಟ್‌ಗಳ ಬಳಿ ಸುಲಭವಾಗಿ ಖರೀದಿಸುವಂತಹ ಒಂದು ಸಾವಿರಕ್ಕೂ ಹೆಚ್ಚು ವಿಶೇಷ ನೋಟುಗಳಿವೆ. ಸಂಖ್ಯೆಯ ಕೊನೆಯಲ್ಲಿ 786 ಸಂಖ್ಯೆಯನ್ನು ಹೊಂದಿರುವ ನೋಟುಗಳು ಮತ್ತು ನಾಣ್ಯಗಳು ಭಾರಿ ಬೇಡಿಕೆಯಲ್ಲಿವೆ. ಇಂತಹ ನೋಟುಗಳು ಅಥವಾ ನಾಣ್ಯಗಳು ಲಕ್ಷಾಂತರ ರೂಪಾಯಿಗಳಿಗೆ ಖರೀದಿಸುವ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ.

Share this Story:

Follow Webdunia kannada