Webdunia - Bharat's app for daily news and videos

Install App

ವಿಕಿ ಲೀಕ್ಸ್ ಹೇಳಿದ್ದು: ಸಂಸದರ ಖರೀದಿಗೆ 50-60 ಕೋಟಿ!

Webdunia
ಗುರುವಾರ, 17 ಮಾರ್ಚ್ 2011 (12:55 IST)
PTI
ಇದೀಗ ದೇಶವನ್ನೇ ಕೋಲಾಹಲದ ಮಡುವಿನಲ್ಲಿ, ಆತಂಕದ ಸ್ಥಿತಿಯಲ್ಲಿ ಮುಳುಗಿಸಿರುವ ವಿಕಿಲೀಕ್ಸ್ ಸ್ಫೋಟಕ ಮಾಹಿತಿ 'ಕಾಂಗ್ರೆಸ್ ಪಕ್ಷವು ಮನಮೋಹನ್ ಸಿಂಗ್ ಸರಕಾರ ಉಳಿಸಿಕೊಳ್ಳಲು 2008ರಲ್ಲಿ ಸಂಸದರಿಗೆ ಸರ್ಕಾರದ ಪರ ಓಟು ಹಾಕಲು ನೋಟು ಆಫರ್ ಮಾಡಿತ್ತು' ಎಂಬುದು ಪ್ರಜಾತಂತ್ರ ವ್ಯವಸ್ಥೆಗೇ ಕಳಂಕ ತಂದಿದೆ.

ಭಾರತ-ಅಮೆರಿಕ ಪರಮಾಣು ಒಪ್ಪಂದದಲ್ಲಿ 'ಏನೋ ಇದೆ' ಎನ್ನುತ್ತಾ ಅದನ್ನು ವಿರೋಧಿಸಿ ಎಡಪಕ್ಷಗಳು ಯುಪಿಎಗೆ ನೀಡುತ್ತಿದ್ದ ಬೆಂಬಲ ಹಿಂತೆಗೆದುಕೊಂಡಿದ್ದರಿಂದ ಅದು ಅಲ್ಪಮತಕ್ಕೆ ಇಳಿದಿತ್ತು. ಆ ಬಳಿಕ, 2008ರ ಜುಲೈ 22ರಂದು ನಡೆದ ಯುಪಿಎ-1 ಸರಕಾರದ ವಿಶ್ವಾಸ ಮತ ಯಾಚನೆ ಸಂದರ್ಭ ಸಂಸದರು ಕೋಟಿ ಕೋಟಿ ಹಣದ ಕಂತೆಗಳನ್ನು ಲೋಕಸಭೆಯಲ್ಲಿ ಪ್ರದರ್ಶಿಸಿ (ಫೈಲ್ ಚಿತ್ರ ನೋಡಿ), ತಮಗೆ ಲಂಚದ ಆಫರ್ ಮಾಡಲಾಗಿದೆ ಎನ್ನುತ್ತಾ, ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು ತಲೆ ತಗ್ಗಿಸುವಂತಾಗಿತ್ತು. ಯುಪಿಎ ಸರಕಾರವೇನೋ ಅಲ್ಪ ಅಂತರದಿಂದ ಅವಿಶ್ವಾಸ ನಿರ್ಣಯದಿಂದ ಪಾರಾಯಿತು. ಆದರೆ ಮನಮೋಹನ್ ಸಿಂಗ್ ಅವರ ಪ್ರತಿಷ್ಠೆ ಮಣ್ಣಾಯಿತು.

ಹಾಗಿದ್ದರೆ ದಿ ಹಿಂದೂ ಪತ್ರಿಕೆಯ ಮೂಲಕ ಗುರುವಾರ ಸ್ಫೋಟಗೊಂಡ ಈ ವಿಕಿಲೀಕ್ಸ್ ಮಾಹಿತಿಯಲ್ಲಿ ಇರುವ ವಿವರಗಳ ಮೇಲೆ ಒಂದಿಷ್ಟು ಬೆಳಕು:

ಸೋನಿಯಾ ಗಾಂಧಿ ಕುಟುಂಬದ ಅತ್ಯಂತ ಆಪ್ತರಲ್ಲೊಬ್ಬರಾದ ಹಿರಿಯ ಕಾಂಗ್ರೆಸಿಗ ಕ್ಯಾಪ್ಟನ್ ಸತೀಶ್ ಶರ್ಮಾ ಅವರು ನೋಟುಗಳನ್ನೇ ತುಂಬಿದ ಕಂತೆಯನ್ನು ಅಮೆರಿಕ ಅಧಿಕಾರಿಯೊಬ್ಬರಿಗೆ ತೋರಿಸುತ್ತಾ, 'ಇದು ಮನಮೋಹನ್ ಸಿಂಗ್ ಸರಕಾರಕ್ಕೆ ಬೆಂಬಲವನ್ನು ಖರೀದಿಸಲಿಕ್ಕಾಗಿಯೇ ಇದೆ' ಎಂದಿದ್ದರು!

ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಕಿಲೀಕ್ಸ್ ವರದಿ ಪ್ರಕಾರ, ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿ ಮನಮೋಹನ್ ಸಿಂಗ್ ಸರಕಾರದ ವಿಶ್ವಾಸಮತ ಯಾಚನೆಯ ಐದು ದಿನಗಳಿಗೆ ಮುನ್ನ, ಕಾಂಗ್ರೆಸಿಗ ಸತೀಶ್ ಶರ್ಮಾ ಅವರ ರಾಜಕೀಯ ಸಹಾಯಕರೊಬ್ಬರು, ಅಮೆರಿಕ ರಾಯಭಾರ ಕಚೇರಿಯ ಉದ್ಯೋಗಿಯೊಬ್ಬರಿಗೆ 'ಹಣ ತುಂಬಿದ ಎರಡು ಥೈಲಿಗಳನ್ನು' ತೋರಿಸಿ, ಸಂಸದರ ಬೆಂಬಲವನ್ನು ಖರೀದಿಸಲು ತಮ್ಮ ಪಕ್ಷವು ಒಟ್ಟುಗೂಡಿಸಿರುವ 50ರಿಂದ 60 ಕೋಟಿ ರೂಪಾಯಿ ಹಣದ ಭಾಗವಿದು ಎಂದೂ ಹೇಳಿದ್ದರು.

ಹಿಂದೂ ಪತ್ರಿಕೆಯು ಜಾಗತಿಕ ಮಟ್ಟದಲ್ಲಿ ಭಾರೀ ಕೋಲಾಹಲವೆಬ್ಬಿಸಿರುವ ವಿಕಿಲೀಕ್ಸ್‌ನ ಸಂಪಾದಕ ಜೂಲಿಯನ್ ಅಸಾಂಜೆ ಅವರಿಂದ ಈ ಕೇಬಲ್‌ಗಳನ್ನು ಪಡೆದು, ಭಾರತಕ್ಕೆ ಸಂಬಂಧಿಸಿದ ಅಂಶಗಳನ್ನು ಸರಣಿ ರೂಪದಲ್ಲಿ ಪಡೆಯುತ್ತಿದೆ.

ಸತೀಶ್ ಶರ್ಮಾ ಅವರು ಗಾಂಧಿ ಕುಟುಂಬದ ಆಪ್ತರಾಗಿದ್ದು, ಹತ್ಯೆಗೀಡಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅಂತರಂಗದ ಗೆಳೆಯರೂ ಆಗಿದ್ದರು. ಸರಕಾರದ ಪರವಾಗಿ ವಿಶ್ವಾಸ ನಿರ್ಣಯದ ಮತ ಯಾಚನೆ ವೇಳೆ ಮತ ಚಲಾಯಿಸಲು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ನಾಲ್ವರು ಸಂಸದರಿಗೆ ಈಗಾಗಲೇ ತಲಾ 10 ಕೋಟಿ ರೂಪಾಯಿ ನೀಡಲಾಗಿದೆ ಎಂದೂ ಸತೀಶ್ ಶರ್ಮಾ ಅವರ ಸಹಾಯಕ ಹೇಳಿರುವುದಾಗಿ ವಿಕಿಲೀಕ್ಸ್‌ನಲ್ಲಿದೆ.

2008 ರ ಜುಲೈ 22ರಂದು ನಡೆದ ವಿಶ್ವಾಸಮತ ಯಾಚನೆ ಸಂದರ್ಭ ಸರಕಾರಕ್ಕೆ ಅಗತ್ಯವಿರುವ 273 ಮತಗಳು ದೊರೆತಿದ್ದರೆ, 251 ಮಂದಿ ವಿರುದ್ಧ ಮತ ಚಲಾಯಿಸಿದ್ದರು. 19 ಮಂದಿ ಮತದಾನದಿಂದ ಹೊರಗುಳಿದು, ಸರಕಾರವು ಬದುಕುಳಿಯಲು ಕಾರಣರಾಗಿದ್ದರು.

ಈ ಕುರಿತು ಟಿವಿ ಮಾಧ್ಯಮಗಳಿಗೆ ಗುರುವಾರ ಸ್ಪಷ್ಟನೆ ನೀಡಿರುವ ಸತೀಶ್ ಶರ್ಮಾ ಅವರ ಸಹಾಯಕ ಎಂದು ವಿಕಿಲೀಕ್ಸ್‌ನಲ್ಲಿ ಉಲ್ಲೇಖಿಸಲಾಗಿರುವ ನಚಿಕೇತ ಕಪೂರ್ ಎಂಬವರು, 'ನಾನೇನೂ ಮಾಡಿಲ್ಲ, ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಯಾವುದೇ ಅಮೆರಿಕ ಅಧಿಕಾರಿಯೊಂದಿಗೆ ಹಣದ ಬಗ್ಗೆ ಮಾತನಾಡಿಲ್ಲ. ಈ ವರದಿಗೆ ಕಾರಣರಾದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಒಂದೇ ಯುವತಿಯನ್ನು ಮದುವೆಯಾದ ಸಹೋದರರು, ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ 6 ವರ್ಷದಲ್ಲಿ 5 ಮದುವೆ

ವಿಪಕ್ಷಗಳ ಬೇಡಿಕೆಯಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಬಗ್ಗೆ ಚರ್ಚೆ

Show comments