ವಿಶ್ವಸಂಸ್ಥೆಯ ಸಂಘಟಕರ ಭಾರತೀಯ ಫೆಡರೇಶನ್ (IFUNA) , ಫ್ರೆಂಡ್ಸ್ ಆಫ್ ಡಿಪರೆಂಟ್ಲಿ ಏಬಲ್ಡ (FODA) ಸಹಯೋಗದೊಂದಿಗೆ ವಿಕಲ ಚೇತನರಿಗಾಗಿ ಪ್ರತ್ಯೇಕ ಜೊಬ್ ಪೋರ್ಟಲ್ ನ್ನು (www.jobs4differentlyabled.in) ಇತ್ತೀಚೆಗೆ ಪ್ರಾರಂಭಿಸಿತು.
ಪತ್ರಿಕಾ ಹೇಳಿಕೆಯ ಪ್ರಕಾರ, ಈ ಪೋರ್ಟಲ್, ಜಾಬ್ ಸಂಸ್ಥೆ ಮತ್ತು ಹೆಸರು ಇತರ ವಿವರಗಳನ್ನು ಅಪ್ಲೋಡ್ ಮಾಡಿದ ವಿಕಲಚೇತನರ ನಡುವೆ ಸಂಪರ್ಕ ಕಲ್ಪಿಸುತ್ತದೆ.
" ವಿವಿಧ ವಾಣಿಜ್ಯ ಚೇಂಬರ್ಗಳ ಜೊತೆ ಮಾತುಕತೆ ನಡೆಯುತ್ತಿದೆ. ಇದರಿಂದ ಅವರ ಅಗತ್ಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅವರ ಅವಶ್ಯಕತೆಗಳನ್ನು ಆಧರಿಸಿ, ಅಗತ್ಯ ಅರ್ಹತೆ ಹೊಂದಿರುವ ವಿಕಲಾಂಗತೆಗಳುಳ್ಳ ವ್ಯಕ್ತಿಗಳಿಗೆ ತರಬೇತಿ ಸಹ ಒದಗಿಸಬಹುದು" ಎಂದು ವಿಶ್ವಸಂಸ್ಥೆಯ ಸಂಘಟಕರ ಭಾರತೀಯ ಫೆಡರೇಶನ್ನಿನ ಕಾರ್ಯದರ್ಶಿ ವಿ ನಾರಾಯಣನ್ ಹೇಳಿದ್ದಾರೆ.
ತಮ್ಮ ವಿವರಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗದಿದ್ದವರು, ಪ್ರತಿ ಶನಿವಾರದಂದು 4 ಗಂಟೆಯಿಂದ 8 ಗಂಟೆಯವರೆಗೆ ಸಾಲಿಗ್ರಾಮದ ಡಾ ಎಂಜಿಆರ್ ಜಾನಕಿ ಸ್ಕೂಲ್ ನಲ್ಲಿ ಸಹಾಯ ಪಡೆಯಬಹುದು ಎಂದು ವಿಕಲಚೇತನರ ಕಲ್ಯಾಣಕಾರಿ ತಮಿಳುನಾಡು ಉದವಿಕ್ಕರಂ ಒಕ್ಕೂಟದ (TNUAWDA) ಅಧ್ಯಕ್ಷರಾದ ಟಿ ಎ ಪಿ ವರದಕುಟ್ಟಿ ತಿಳಿಸಿದ್ದಾರೆ.
ವಿಕಲಚೇತನರ ರಾಜ್ಯಕಮಿಷನರ್ ಕೆ ಮಣಿವಾಸನ್ ಪೋರ್ಟಲ್ ನ್ನು ಉದ್ಘಾಟಿಸಿದರು. ಫೋಡಾ ಸಂಚಾಲಕ ಕೆ ಶ್ರೀರಾಮ್, TNUAWDA ಪ್ರಧಾನ ಕಾರ್ಯದರ್ಶಿ ಕೆ ಗೋಪಿನಾಥ್ ಮತ್ತು ಡಾ ಎಂಜಿಆರ್ ಹೈಯರ್ ಸೆಕೆಂಡರಿ ಶಾಲೆ(ವಾಕ್ ಮತ್ತು ಶ್ರವಣ ದೋಷ)ದ ಪ್ರಾಂಶುಪಾಲರಾದ ಲತಾ ರಾಜೇಂದ್ರನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.