Select Your Language

Notifications

webdunia
webdunia
webdunia
webdunia

ವಯಸ್ಕರ ಚಿತ್ರ: ಹಿಂದಿ ಫಸ್ಟ್, ಕನ್ನಡಕ್ಕೆ ನಾಲ್ಕನೇ ಸ್ಥಾನ..!

ವಯಸ್ಕರ ಚಿತ್ರ: ಹಿಂದಿ ಫಸ್ಟ್, ಕನ್ನಡಕ್ಕೆ ನಾಲ್ಕನೇ ಸ್ಥಾನ..!
ಮುಂಬೈ , ಗುರುವಾರ, 31 ಡಿಸೆಂಬರ್ 2009 (16:15 IST)
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ವಯಸ್ಕರಿಗೆ ಮಾತ್ರ ಸೀಮಿತವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕಾರಣ ಕಳೆದ ವರ್ಷ 63 ವಯಸ್ಕರ ಚಿತ್ರಗಳಿಗೆ ಹಿಂದಿ ಚಿತ್ರರಂಗ ಸಾಕ್ಷಿಯಾಗಿರುವುದು. ಕನ್ನಡದಲ್ಲಿ ಗಮನಾರ್ಹ ಪ್ರಮಾಣದ 'ಎ' ಚಿತ್ರಗಳು ಬರದಿದ್ದರೂ 21 ಸಿನಿಮಾಗಳನ್ನು 2008ರಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸರಕಾರ ಉತ್ತರಿಸಿದೆ.

ಒಟ್ಟಾರೆ ಲೆಕ್ಕಾಚಾರವನ್ನು ಗಮನಿಸಿದಾಗ ಬಾಲಿವುಡ್ ವಯಸ್ಕರ ಚಿತ್ರಗಳ ಸರಾಸರಿಯಲ್ಲಿ ಪ್ರಾದೇಶಿಕ ಸಿನಿಮಾಗಳನ್ನು ಮೆಟ್ಟಿ ನಿಂತಿದೆ. ಒಟ್ಟು ಬಿಡುಗಡೆಯಾದ 248 ಹಿಂದಿ ಸಿನಿಮಾಗಳಲ್ಲಿ 63 'ಎ' ಹಣೆಪಟ್ಟಿ ಹೊಂದಿದ್ದರೆ, 92 'ಯುಎ' ಪ್ರಮಾಣ ಪತ್ರ ಪಡೆದಿವೆ. ಕೇವಲ 93 ಚಿತ್ರಗಳು ಮಾತ್ರ ಕುಟುಂಬ ಸಮೇತ ನೋಡುವಂತದ್ದು.

ಸೆನ್ಸಾರ್ ಮಂಡಳಿಯಿಂದ 'ಎ' ಹಣೆಪಟ್ಟಿಯೊಂದಿಗೆ ಬಿಡುಗಡೆಯಾಗುವ ಸಿನಿಮಾಗಳನ್ನು 18 ಅಥವಾ ಅದಕ್ಕಿಂತ ಮೇಲ್ಪಟ್ಟವರು ಮಾತ್ರ ವೀಕ್ಷಿಸಲು ಅವಕಾಶವಿದೆ. ಇಲ್ಲಿ 'ಎ' ಎಂದು ಬಳಸಿರುವುದರ ಅರ್ಥ ಲೈಂಗಿಕ, ಹಿಂಸಾತ್ಮಕ ಮತ್ತು ಅಸಭ್ಯತೆಗಳು ಚಿತ್ರದಲ್ಲಿವೆ ಎಂದು. 'ಯು' ಎಂದು ಹೆಸರಿಸುವ ಚಿತ್ರಗಳನ್ನು ಮಕ್ಕಳು ಸೇರಿದಂತೆ ಇಡೀ ಕುಟುಂಬ ನೋಡಬಹುದು. ಆದರೆ 'ಎಯು' ಎಂದು ಪ್ರಮಾಣ ಪತ್ರ ಪಡೆದ ಚಲನಚಿತ್ರಗಳನ್ನು ಪೋಷಕರ ಮಾರ್ಗದರ್ಶನದೊಂದಿಗೆ ನೋಡಬಹುದು.

ಹಾಗಾಗಿ ಬಾಲಿವುಡ್ ಈ ಬಾರಿ ಮಕ್ಕಳಾದಿಯಾಗಿ ಕುಟುಂಬ ಸಮೇತ ನೋಡಬಹುದಾದ ಚಿತ್ರಗಳನ್ನು ನೀಡಿರುವುದು ಕೇವಲ 93 ಮಾತ್ರ. ಇದು ತೀರಾ ಆತಂಕವನ್ನು ಹುಟ್ಟಿಸಿದೆ ಎಂದು ಮಾಹಿತಿ ಹಕ್ಕು ಕಾಯ್ದೆ ಮೂಲಕ ವರದಿಯನ್ನು ತರಿಸಿಕೊಂಡಿರುವ ಚೇತನ್ ಕೊಟ್ಟಾರಿ ಎಂಬವರು ತಿಳಿಸಿದ್ದಾರೆ.

2008ರಲ್ಲಿ ಭಾರತ ಸಿನಿಮಾ ರಂಗವು ವಯಸ್ಕರ ಚಿತ್ರಗಳಲ್ಲಿ ಏರಿಕೆ ದಾಖಲಿಸಿರುವುದು ಹೌದು. ಬಾಲಿವುಡ್ 63 ವಯಸ್ಕರ ಚಿತ್ರಗಳನ್ನು ಬಿಡುಗಡೆ ಮಾಡಿದ್ದರೆ, ತೆಲುಗು 62 ಸಿನಿಮಾಗಳನ್ನು ಬಿಡುಗಡೆ ಮಾಡುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. ತಮಿಳು 37, ಕನ್ನಡ 21 ಹಾಗೂ ಮಲಯಾಳಂ 13 ವಯಸ್ಕರ ಚಿತ್ರಗಳನ್ನು ಬೆಳ್ಳಿತೆರೆಗೆ ಅರ್ಪಿಸಿದೆ.

Share this Story:

Follow Webdunia kannada