Webdunia - Bharat's app for daily news and videos

Install App

ಲೋಕಸಭೆ ಚುನಾವಣೆ ನಂತ್ರ ಸಮ್ಮಿಶ್ರ ಸರಕಾರ: ಆಡ್ವಾಣಿ

Webdunia
ಗುರುವಾರ, 4 ಏಪ್ರಿಲ್ 2013 (11:45 IST)
PTI
ಪ್ರಸಕ್ತ ಸಾಲಿನ ಅಂತ್ಯದ ವೇಳೆ ಮಹಾಚುನಾವಣೆ ನಡೆಯಲಿದೆಯೆಂದು ನಿರೀಕ್ಷಿಸಿರುವ ಬಿಜೆಪಿ ನಾಯಕ ಎಲ್‌.ಕೆ. ಆಡ್ವಾಣಿ, ತನ್ನ ಪಕ್ಷ ಅಥವಾ ಕಾಂಗ್ರೆಸ್‌ನ ಬೆಂಬಲವಿಲ್ಲದೆ ಕೇಂದ್ರದಲ್ಲಿ ಯಾವುದೇ ಸರಕಾರ ರಚಿಸಲು ಸಾಧ್ಯವಾಗದು ಎಂದು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಎರಡು ಪಕ್ಷಗಳಲ್ಲಿ ಯಾವುದೇ ಪಕ್ಷ ಬಹುಮತ ಗಳಿಸದೆಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

'2013 ರಲ್ಲಿ ಆರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದ ಬಳಿಕ ಲೋಕಸಭಾ ಚುನಾವಣೆ ನಡೆಯಲಿದೆಯೆಂದು ನಾನು ನಿರೀಕ್ಷಿಸಿದ್ದೇನೆ. ಚುನಾವಣೆ ಯಾವಾಗ ನಡೆದರೂ ಕಾಂಗ್ರೆಸ್‌ ಸೋಲುವುದು ಖಚಿತ' ಎಂದವರು ಬುಧವಾರ ಇಲ್ಲಿ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಹೇಳಿದರು.

ತನ್ನ ಪಕ್ಷದಿಂದಾಗಿ ರಾಜಕೀಯ ವ್ಯವಸ್ಥೆ ಎರಡು ಧ್ರುವಗಳ ರಾಜಕಾರಣವಾಗಿ ಪರಿವರ್ತಿತವಾಗಿದೆ ಎಂದು ಒತ್ತಿಹೇಳಿದ ಅವರು, 'ಬಿಜೆಪಿ ಅಥವಾ ಕಾಂಗ್ರೆಸ್‌ನ ಬೆಂಬಲವಿಲ್ಲದೆ ಕೇಂದ್ರದಲ್ಲಿ ಯಾವುದೇ ಸರಕಾರ ರಚನೆಯಾಗದು. ಇದು ಎರಡು ಪಕ್ಷಗಳ ವ್ಯವಸ್ಥೆಯಾಗಿರದು. ಆದರೆ ಬಿಜೆಪಿಯ ಯತ್ನಗಳಿಂದಾಗಿ ಖಂಡಿತಕ್ಕೂ ದ್ವಿಧ್ರುವ ರಾಜಕೀಯ ವ್ಯವಸ್ಥೆಯಾಗಿ ಬದಲಾಗಿದೆ' ಎಂದರು.

ಕರ್ನಾಟಕ, ದಿಲ್ಲಿ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಝಾರ್ಖಂಡ್‌ಗಳಲ್ಲಿನ ಚುನಾವಣೆಯಲ್ಲಿ ಮುಖ್ಯ ಸ್ಪರ್ಧೆಯಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ. 'ಈ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಫ‌ಲಿತಾಂಶವನ್ನು ನಿರೀಕ್ಷಿಸುತ್ತಿದೆ. ಅನಂತರ ಲೋಕಸಭಾ ಚುನಾವಣೆ ನಡೆಯಲಿದೆ' ಎಂದ ಆಡ್ವಾಣಿ, ಪ್ರಸಕ್ತ ಆಡಳಿತದ ಹಗರಣಗಳು ಮತ್ತು ಭ್ರಷ್ಟಾಚಾರದಿಂದ ಜನಸಾಮಾನ್ಯರು ರೋಸಿಹೋಗಿದ್ದಾರೆ ಮತ್ತು ಪ್ರಸಕ್ತ ಸರಕಾರ ತೊಲಗಬೇಕೆಂದು ಬಯಸಿದ್ದಾರೆ ಎಂದರು.

ಇದೇ ಸಮಯ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌ ಅವರು ಕೂಡ ಅವಧಿಪೂರ್ವ ಚುನಾವಣೆಯನ್ನು ನಿರೀಕ್ಷಿಸಿದ್ದಾರೆ ಮತ್ತು ಮುಂದಿನ ಸರಕಾರ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದಕ್ಕಾಗಿ 'ಗರಿಷ್ಠ' ಸ್ಥಾನಗಳನ್ನು ಗೆಲ್ಲುವುದಕ್ಕೆ ಶ್ರಮಿಸುವಂತೆ ಪಕ್ಷ ಕಾರ್ಯಕರ್ತರಿಗೆ ಕರೆಯಿತ್ತಿದ್ದಾರೆ.

ಲಕ್ನೋದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಚುನಾವಣೆ ಯಾವುದೇ ವೇಳೆ ನಡೆಯುವ ಸಾಧ್ಯತೆಯಿರುವುದರಿಂದ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಹೇಳಿದರು.

' ಎಸ್‌ಪಿ ಗರಿಷ್ಠ ಸ್ಥಾನಗಳನ್ನು ಗೆಲ್ಲಬೇಕು. ಇದರಿಂದ ಅದು ದಿಲ್ಲಿಯಲ್ಲಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದಾಗಿದೆ' ಎಂದವರು ನುಡಿದರು. ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 71 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಲಾಗಿದೆ ಎಂದು ಬೆಟ್ಟು ಮಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ವಿಪಕ್ಷಗಳು ನಡೆಸುತ್ತಿರುವ ಅಪಪ್ರಚಾರ ಕುರಿತು ಎಚ್ಚರದಿಂದ ಇರುವಂತೆ ಪಕ್ಷೀಯರಿಗೆ ಕರೆಯಿತ್ತರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments