Select Your Language

Notifications

webdunia
webdunia
webdunia
webdunia

ಲೋಕಸಭಾ ಚುನಾವಣೆ: ಕ್ಷಣ ಕ್ಷಣದ ಸುದ್ದಿಗಳು

ಲೋಕಸಭಾ ಚುನಾವಣೆ: ಕ್ಷಣ ಕ್ಷಣದ ಸುದ್ದಿಗಳು
ನವದೆಹಲಿ , ಗುರುವಾರ, 17 ಏಪ್ರಿಲ್ 2014 (10:53 IST)
PR
ಇಂದು ಐದನೇ ಸುತ್ತಿನ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇದರ ಲೈವ್‌ ಸುದ್ದಿಗಾಗಿ ಈ ಸುದ್ದಿ ಓದಿ

* ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿ ಅಶೋಕ್ ಚೌಹ್ವಾಣ ನಾಂದೇಡ್‌‌‌ನಲ್ಲಿ ಮತದಾನ ಮಾಡಿದ್ದಾರೆ.

* ಬಿಜೆಪಿಯ ಹಿರಿಯ ನೇತಾರ ಜಸವಂತ್‌ ಸಿಂಗ್‌‌ ಮತದಾನಕ್ಕು ಮೊದಲು ಚುನಾವಣೆ ಆಯೋಗದ ಹತ್ತಿರ ಹೋಗಿ ರಾಜ್ಯ ಪೋಲಿಸರ ವಿರುದ್ದ ದೂರನ್ನು ಸಲ್ಲಿಸಿದ್ದಾರೆ.

* ಬಿಹಾರದ 7, ಜಾರ್ಖಂಡ್‌‌ 6, ಪ.ಬಂಗಾಲ 4, ಛತ್ತಿಸಘಡ್‌‌ 3 , ಜಮ್ಮು ಕಾಶ್ಮಿರ 1 ಮತ್ತು ಮಣಿಪುರ್‌ 1 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

* ಕರ್ನಾಟಕದ 28, ರಾಜ್ಯಸ್ಥಾನದ 20, ಮಹಾರಾಷ್ಟ್ರ 19 , ಉತ್ತರ ಪ್ರದೇಶ 11, ಓಡಿಶಾ 11 ಮತ್ತು ಮಧ್ಯ ಪ್ರದೇಶದ 10 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

* ಒಟ್ಟು 121 ಕ್ಷೇತ್ರಗಳಲ್ಲಿ 11 ಕೊಟಿ 80 ಲಕ್ಷಕ್ಕಿಂತ ಹೆಚ್ಚಿನ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ ಮತ್ತು 121 ಕ್ಷೇತ್ರಗಳಲ್ಲಿ ಒಟ್ಟು 1761 ಉಮೇದುವಾರರು ಕಣದಲ್ಲಿದ್ದಾರೆ.

* ಮಾಜಿ ಪ್ರಧಾನ ಮಂತ್ರಿ ಎಚ್‌‌.ಡಿ.ದೇವೇಗೌಡ‌‌, ಮಾಜಿ ಕೇಂದ್ರ ಮಂತ್ರಿ ಜಸ್ವಂತ್‌ ಸಿಂಗ್‌‌ , ಕೇಂದ್ರ ಮಂತ್ರಿ ಸುಶೀಲ ಕುಮಾರ್ ಶಿಂಧೆ, ಗುಲಾಮ್ ನಬಿ ಆಜಾದ್, ಶತ್ರುಘ್ನ ಸಿಹ್ನಾ, ಮೇನಕಾ ಗಾಂಧಿ, ಮಾಜಿ ಕ್ರೀಕೆಟ್ ಆಟಗಾರ ಮೊಹಮ್ಮದ್ ಅಜರುದ್ದಿನ್ , ಒಲಂಪಿಕ್‌‌ನಲ್ಲಿ ರಜತ ಪದಕ ವಿಜೇತ ರಾಜವರ್ಧನ್ ಸಿಂಗ್‌‌ ರಾಥೋಡ್‌ , ನಂದನ್ ನೀಲಕೇಣಿ ಮತ್ತು ಮುಂತಾದ ಗಣ್ಯರು ಇಂದು ಚುನಾವಣೆ ಎದುರಿಸುತ್ತಿದ್ದಾರೆ.

Share this Story:

Follow Webdunia kannada