Select Your Language

Notifications

webdunia
webdunia
webdunia
webdunia

ಲೈಂಗಿಕ ದೌರ್ಜನ್ಯ: ತೇಜಪಾಲ್ ಬಂಧನಕ್ಕೆ ಹೊರಟ ಗೋವಾ ಪೊಲೀಸರು

ಲೈಂಗಿಕ ದೌರ್ಜನ್ಯ: ತೇಜಪಾಲ್ ಬಂಧನಕ್ಕೆ ಹೊರಟ ಗೋವಾ ಪೊಲೀಸರು
, ಶುಕ್ರವಾರ, 22 ನವೆಂಬರ್ 2013 (18:20 IST)
PR
PR
ನವದೆಹಲಿ: ತೆಹಲ್ಕಾದ ಸಂಸ್ಥಾಪಕ ತರುಣ್ ತೇಜ್‌ಪಾಲ್ ಮಹಿಳಾ ಸಹೋದ್ಯೋಗಿಯ ಮೇಲೆ ರೇಪ್ ಮಾಡಿದ ಆರೋಪದ ಮೇಲೆ ಗೋವಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈಗ ಅವರನ್ನು ಬಂಧಿಸಲು ದೆಹಲಿಗೆ ಪೊಲೀಸ್ ತಂಡವೊಂದು ತೆರಳುತ್ತಿದೆ. ಗೋವಾದಲ್ಲಿ ತೆಹಲ್ಕಾಗೆ ಸಂಬಂಧಿಸಿದ ಸಮಾರಂಭದಲ್ಲಿ ತನ್ನ ಮೇಲೆ ತೇಜಪಾಲ್ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ತೇಜಪಾಲ್ ಸಹೋದ್ಯೋಗಿ ಆರೋಪ ಮಾಡಿದ್ದರು. ಮಹಿಳೆಯ ಮೇಲಾಧಿಕಾರಿಯಾಗಿ ಮೇಲುಗೈ ಹೊಂದಿದ್ದ ವ್ಯಕ್ತಿ ಮಹಿಳೆಯ ಶೀಲಭಂಗ ಮಾಡಿದ್ದಾರೆ ಎಂದು ಕೂಡ ತೇಜ್‌ಪಾಲ್ ವಿರುದ್ಧ ಆರೋಪಿಸಲಾಗಿದ್ದು, ಇದು ಗರಿಷ್ಠ ಜೀವಾವಧಿ ಶಿಕ್ಷೆ ಅಥವಾ ಕನಿಷ್ಠ ಹತ್ತುವರ್ಷಗಳ ಜೈಲು ಶಿಕ್ಷೆಗೆ ಅರ್ಹವಾಗಿದೆ.

ತೇಜಪಾಲ್ ಈ ಕುರಿತು ಪ್ರತಿಕ್ರಿಯಿಸಿ, ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಬಿಡುಗಡೆ ಮಾಡಿದರೆ ಘಟನೆಗಳ ನಿಖರ ರೂಪ ಬಹಿರಂಗವಾಗುತ್ತದೆ ಎಂದು ಹೇಳಿದ್ದಾರೆ. ಫೈವ್ ಸ್ಟಾರ್ ಹೊಟೆಲ್ ಸೆಕ್ಯೂರಿಟಿ ಕ್ಯಾಮೆರಾದ ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿರುವುದಾಗಿ ಗೋವಾ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada